ಉಡುಪಿ | ಸುಗಮ ಸಂಚಾರಕ್ಕೆ ಸಿಗ್ನಲ್ ಲೈಟ್: ಫ್ರೀ ಲೆಫ್ಟ್‌ನಲ್ಲಿ ದಾರಿ ಬಿಡಿ...
ಉಡುಪಿಯ ಕಲ್ಸಂಕ, ಮಣಿಪಾಲದ ಸಿಂಡಿಕೇಟ್ ಜಂಕ್ಷನ್‌ಗಳಲ್ಲಿ ಫ್ರೀಲೆಫ್ಟ್‌ನಲ್ಲಿ ವಾಹನ ನಿಲ್ಲಿಸುವುದರಿಂದ ಸಮಸ್ಯೆ
ನವೀನ್ ಕುಮಾರ್ ಜಿ.
Published : 16 ಫೆಬ್ರುವರಿ 2026, 2:46 IST
Last Updated : 16 ಫೆಬ್ರುವರಿ 2026, 2:46 IST
ADVERTISEMENT
ಫಾಲೋ ಮಾಡಿ
Comments
ಕಲ್ಸಂಕ ಜಂಕ್ಷನ್‌ನಲ್ಲಿ ಕೃಷ್ಣಮಠದ ಕಡೆಗೆ ಹೋಗುವ ಫ್ರೀಲೆಫ್ಟ್‌ನಲ್ಲಿ ದ್ವಿಚಕ್ರವಾಹನ ಸವಾರರು ವಾಹನ ನಿಲ್ಲಿಸಿರುವುದು
ಇನ್ನೆರಡು ಜಂಕ್ಷನ್‌ಗಳಲ್ಲಿ ಸಿಗ್ನಲ್‌ದೀಪ
ಕಲ್ಸಂಕ ಮತ್ತು ಮಣಿಪಾಲದ ಸಿಂಡಿಕೇಟ್ ವೃತ್ತಗಳಲ್ಲಿ ಮೊದಲ ಹಂತದಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಿದ್ದು ಅದು ಯಶಸ್ವಿಯಾದ ಕಾರಣ ಇದೀಗ ಮತ್ತೆರಡು ಜಂಕ್ಷನ್‌ಗಳಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಲು ಸಿದ್ಧತೆ ನಡೆದಿದೆ. ಅಂಬಾಗಿಲು ಮತ್ತು ಬಲೈಪಾದೆಗಳಲ್ಲಿ ಶೀಘ್ರ ಸಿಗ್ನಲ್ ದೀಪ ಅಳವಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ. ಅಲ್ಲದೆ ಈ ಜಂಕ್ಷನ್‌ಗಳಿಗೆ ತೆರಳಿ ಅವರು ಈಚೆಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
‘ಎಐ ಕ್ಯಾಮೆರಾ ಬಂದರೆ ದಂಡ ಬೀಳುತ್ತೆ’
‘ಕಲ್ಸಂಕ ಸೇರಿದಂತೆ ವಿವಿಧ ಜಂಕ್ಷನ್‌ಗಳಲ್ಲಿ ಸದ್ಯ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ವಾಹನಗಳ ನಂಬರ್ ಪ್ಲೇಟ್‌ಗಳನ್ನು ಗರುತಿಸುವ ಎಐ ಕ್ಯಾಮೆರಾ ಶೀಘ್ರ ಅಳವಡಿಸಲಾಗುವುದು. ಈ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿದೆ. ಎಐ ಕ್ಯಾಮೆರಾ ಅಳವಡಿಕೆಯಾದರೆ ನಿಯಮ ಉಲ್ಲಂಘಿಸುವವರಿಗೆ ದಂಡ ಬೀಳಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು. ‘ಸದ್ಯ ಕಲ್ಸಂಕ ಜಂಕ್ಷನ್‌ನಲ್ಲಿ ಫ್ರೀಲೆಫ್ಟ್ ಜಾಗದಲ್ಲಿ ಫಲಕ ಸ್ಥಾಪಿಸಲಾಗಿದೆ. ಅಲ್ಲಿ ರಸ್ತೆಯಲ್ಲಿ ವೈಜ್ಞಾನಿಕವಾಗಿ ಫ್ರೀಲೆಫ್ಟ್ ಲೈನ್ ಹಾಕಲು ಜಾಗದ ಅಭಾವ ಇದೆ. ಅಲ್ಲಿ ಸೇತುವೆ ನಿರ್ಮಾಣವಾದರೆ ಸಮಸ್ಯೆ ಪರಿಹಾರವಾಗಲಿದೆ’ ಎಂದು ತಿಳಿಸಿದರು.