ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಬಗೆಯ ಹೂಗಳ ಬಳಕೆ: ಪರ್ಯಾಯಕ್ಕೆ ಮೆರಗು ನೀಡುವ ದರ್ಬಾರ್ ವೇದಿಕೆ

16 ವರ್ಷಗಳಿಂದ ವೇದಿಕೆ ಅಲಂಕಾರ ಮಾಡುತ್ತಿರುವ ವನದುರ್ಗ ಟ್ರಸ್ಟ್‌
Last Updated 17 ಜನವರಿ 2022, 19:30 IST
ಅಕ್ಷರ ಗಾತ್ರ

ಉಡುಪಿ: ಪರ್ಯಾಯ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಪರ್ಯಾಯ ದರ್ಬಾರ್. ರಾಜರ ಕಾಲದಲ್ಲಿ ನಡೆಯುತ್ತಿದ್ದ ದರ್ಬಾರ್ ಮಾದರಿಯಲ್ಲೇ ಪರ್ಯಾಯದ ದಿನ ರಾಜಾಂಗಣದ ದರ್ಬಾರ್ ವೇದಿಕೆಯನ್ನು ಅಲಂಕರಿಸಲಾಗಿರುತ್ತದೆ. ಬಗೆಬಗೆಯ ಹೂಗಳಿಂದ ದರ್ಬಾರ್ ವೇದಿಕೆಯನ್ನು ಆಕರ್ಷಕವಾಗಿ ಅಲಂಕರಿಸಲಾಗಿರುತ್ತದೆ.

ರಾಜಾಂಗಣದ ದರ್ಬಾರ್ ವೇದಿಕೆಯನ್ನು ಪುಷ್ಪಗಳಿಂದ ಅಲಂಕರಿಸುವ ಹೊಣೆಗಾರಿಕೆಯನ್ನು ಕಳೆದ 16 ವರ್ಷಗಳಿಂದ ನಿಭಾಯಿಸಿಕೊಂಡು ಬಂದಿದೆ ಪಡುಬಿದ್ರಿಯ ವನದುರ್ಗಾ ಡೆಕೊರೇಷನ್ಸ್‌. 25 ಸದಸ್ಯರನ್ನೊಳಗೊಂಡಿರುವ ವನದುರ್ಗ ಸಂಸ್ಥೆಯು ಪರ್ಯಾಯ ದರ್ಬಾರ್ ನಡೆಯುವ ಎರಡು ದಿನ ಮುಂಚಿತವಾಗಿ ರಾಜಾಂಗಣದಲ್ಲಿ ಬೀಡುಬಿಟ್ಟು ಅತ್ಯಾಕರ್ಷಕವಾಗಿ ದರ್ಬಾರ್ ವೇದಿಕೆಯನ್ನು ನಿರ್ಮಾಣ ಮಾಡುತ್ತದೆ.

ತುಮಕೂರು, ಚಿತ್ರದುರ್ಗಸ ಸೇರಿದಂತೆ ಹಲವು ಜಿಲ್ಲೆಗಳಿಂದ 17 ಜಾತಿಯ ಹೂಗಳನ್ನು ತರಿಸಿಕೊಂಡು ದರ್ಬಾರ್ ವೇದಿಕೆಯನ್ನು ನಿರ್ಮಾಣ ಮಾಡಲಾಗುತ್ತದೆ. ಗಾತ್ರ, ಬಣ್ಣದಲ್ಲಿ ಗುಣಮಟ್ಟದ ಹೂಗಳನ್ನು ತರಿಸಿ ‘ದರ್ಬಾರ್ ವೇದಿಕೆ’ ಸಿದ್ಧಪಡಿಸಲಾಗುತ್ತದೆ. ದರ್ಬಾರ್ ವೇದಿಕೆ ಪರ್ಯಾಯದ ಸೊಬಗನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ವನದುರ್ಗ ಸಂಸ್ಥೆಯ ಮುಖ್ಯಸ್ಥರಾದ ರಾಘವೇಂದ್ರ.

ವೇದಿಕೆಗೆ ಬಳಸುವ ಹೂಗಳು: ಕೇಸರಿ ಚೆಂಡು ಹೂ, ಹಳದಿ ಚೆಂಡು ಹೂ, ಆಸ್ಟರ್ ರೋಲ್‌ ಕೆಂಪು ಹಾಗೂ ನೀಲಿ, ಸೇವಂತಿಗೆ, ಕಾಕಡ, ಕನಕಾಂಬರ, ಸೈಪ್ರಸ್‌, ಕಾವೇರಿ, ವೈಟ್‌ ರೋಲ್‌, ಜಾಲರಿ, ಜರ್ಬಾರ ಬಿಳಿ, ಬಿಳಿ ಸೇವಂತಿಗೆ, ಕಣಗಿಲೆ ಕೆಂಪು ಹೀಗೆ ಹಲವು ಪ್ರಬೇಧದ ಹೂಗಳನ್ನು ಬಳಸಿ ದರ್ಬಾರ್ ವೇದಿಕೆ ಸಿದ್ಧಪಡಿಸಲಾಗುತ್ತದೆ ಎನ್ನುತ್ತಾರೆ ರಾಘವೇಂದ್ರ.

ವೇದಿಕೆಗೆ ಸಿಯಾಳಗಳನ್ನು ಬಳಸಿ ಕಮಾನುಗಳನ್ನು ಮಾಡಲಾಗಿದ್ದು, ಸುಂದರವಾಗಿ ಮೂಡಿಬಂದಿದೆ. ಉಡುಪಿ ದರ್ಬಾರ್ ವೇದಿಕೆಯ ಪುಷ್ಫಾಲಂಕಾರಕ್ಕೆ ಮನಸೋತು ಹೊರ ಜಿಲ್ಲೆ, ರಾಜ್ಯಗಳಿಂದ ಪರ್ಯಾಯಕ್ಕೆ ಬಂದವರು ಇದೇ ಮಾದರಿಯಲ್ಲಿ ಹೂವಿನ ಮಂಟಪವನ್ನು ಧಾರ್ಮಿಕ ಉತ್ಸವಗಳಲ್ಲಿ ನಿರ್ಮಾಣ ಮಾಡಿಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ. ‘ದರ್ಬಾರ್ ವೇದಿಕೆ’ ಬ್ರಾಂಡ್‌ನ ‌ಹೂವಿನ ಮಂಟಪ ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದಿದೆ.

ಅಷ್ಟಮಠಗಳ ಯತಿಗಳು ದರ್ಬಾರ್ ವೇದಿಕೆಯನ್ನು ಕಂಡು ಮೆಚ್ಚುಗೆ ಸೂಚಿಸಿ ಗೌರವಿಸಿದ್ದಾರೆ. ವನದುರ್ಗ ಸಂಸ್ಥೆಯು ವೇದಿಕೆಗೆ ಬಳಕೆಯಾಗುವ ಹೂ ಹಾಗೂ ನಿರ್ಮಾಣಕ್ಕೆ ಬಳಸುವ ವಸ್ತುಗಳನ್ನಷ್ಟೆ ಮಠದಿಂದ ಪಡೆಯುತ್ತಿದ್ದು, ನಿರ್ಮಾಣ ಕಾರ್ಯಕ್ಕೆ ಹಣ ಪಡೆಯುವುದಿಲ್ಲ. ಇದು ಕೃಷ್ಣನಿಗೆ ಅರ್ಪಿಸುವ ಸೇವೆ ಎಂದೇ ಭಾವಿಸಿದ್ದೇವೆ ಎಂದರು. ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT