ಮಂಗಳವಾರ, ಜನವರಿ 26, 2021
25 °C

ಅಮೆರಿಕದಿಂದಲೇ ಮೂಕಾಂಬಿಕೆಗೆ ನಮಿಸಿದ ಕೆ.ಜೆ. ಯೇಸುದಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಪ್ರತಿ ವರ್ಷ ಜನವರಿ10 ರಂದು ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಸರಳವಾಗಿ ಜನ್ಮದಿನ ಆಚರಿಸಿಕೊಳ್ಳು
ತ್ತಿದ್ದ ಪ್ರಸಿದ್ಧ ಗಾಯಕ ಕೆ.ಜೆ.ಯೇಸುದಾಸ್‌ ಅವರು, ಈ ಬಾರಿ ಅಮೆರಿಕದಿಂದಲೇ ಮೂಕಾಂಬಿಕೆಗೆ ನಮಿಸಿದ್ದಾರೆ.

ಪ್ರತಿ ವರ್ಷ ಜ.9ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಕೊಲ್ಲೂರಿಗೆ ಬಂದು ವಾಸ್ತವ್ಯ ಮಾಡುತ್ತಿದ್ದು, ಜ.10 ರಂದು ಬೆಳಿಗ್ಗೆ ದೇವಿ ದರ್ಶನ ಪಡೆದು, ಚಂಡಿಕಾ ಹೋಮ ಹಾಗೂ ಇತರ ಪೂಜೆ ಸಲ್ಲಿಸುತ್ತಿದ್ದರು.

ಬಳಿಕ ಮೂಕಾಂಬಿಕೆಗೆ ಭಕ್ತಿ ಸುಧೆ ಅರ್ಪಿಸುವುದು 48 ವರ್ಷಗಳಿಂದ ವಾಡಿಕೆಯಾಗಿತ್ತು.

ಕೋವಿಡ್‌–19ನಿಂದಾಗಿ ಈ ಬಾರಿ ದೇಗುಲದಲ್ಲಿ ಯೇಸುದಾಸ್‌ ಅವರ ಜನ್ಮದಿನ ಹಾಗೂ ಸಂಗೀತಸುಧೆ ಕಾರ್ಯಕ್ರಮ ನಡೆಯದಿರುವುದು ಅಭಿಮಾನಿಗಳಿಗೆ ನಿರಾಶೆ ತಂದಿದೆ.

‘ಯೇಸುದಾಸ್ ಅವರ ಜನ್ಮದಿನ ನಿಮಿತ್ತ ಭಾನುವಾರ ದೇವಸ್ಥಾನದಲ್ಲಿ ಯಾವುದೇ ಸಂಗೀತ ಕಾರ್ಯಕ್ರಮ ಹಾಗೂ ಪೂಜೆ ನಡೆದಿಲ್ಲ’ ಎಂದು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್‌.ಪಿ.ಬಿ.ಮಹೇಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು