ಕಾರ್ಕಳ: ತಾಲ್ಲೂಕಿನ ನಿಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಅಗಲಿದ ದಿ. ವಿನಯ ಹೆಗ್ಡೆ ಅವರಿಗೆ ನುಡಿನಮನ ಸಲ್ಲಿಸಲಾಯಿತು.

ನಿಟ್ಟೆ ಗ್ರಾಮದಲ್ಲಿ ಶೈಕ್ಷಣಿಕ, ವೈದ್ಯಕೀಯ ಹಾಗೂ ಔದ್ಯೋಗಿಕ ಕ್ರಾಂತಿ ನಡೆಸಿ ನಿಟ್ಟೆ ಗ್ರಾಮದ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ವಿನಯ ಹೆಗ್ಡೆ ಸಾಧನೆಯ ಬಗ್ಗೆ ನಿಟ್ಟೆ ಕೆಮ್ಮಣ್ಣು ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಪ್ರಸನ್ನ ಆಚಾರ್ಯ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧಾಕರ ಶೆಟ್ಟಿ, ನಿಟ್ಟೆ ವಿದ್ಯಾಸಂಸ್ಥೆಯ ಹಿರಿಯ ಅಧಿಕಾರಿ ಯೋಗೀಶ್ ಹೆಗ್ಡೆ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಮುನಿಯಾಲು ಉದಯ ಕುಮಾರ್ ಶೆಟ್ಟಿ ಸ್ಮರಿಸಿದರು.

ವಿನಯ ಹೆಗ್ಡೆ ಅವರ ಪುತ್ರ ವಿಶಾಲ ಹೆಗ್ಡೆ ಮಾತನಾಡಿ, ನಿಟ್ಟೆ ಗ್ರಾಮಸ್ಥರೊಂದಿಗೆ ತಂದೆಗೆ ಇದ್ದ ಪ್ರೀತಿ ಮತ್ತು ಅಭಿಮಾನಗಳ ಪ್ರತೀಕವಾಗಿ ನಿಟ್ಟೆಯ ಗ್ರಾಮಸ್ಥರು ಸೇರಿ ಸಲ್ಲಿಸಿದ ನುಡಿನಮನ ಅವರು ಆತ್ಮಕ್ಕೆ ತೃಪ್ತಿ ನೀಡಲಿದೆ ಎಂದರು.

ವಿನಯ ಹೆಗ್ಡೆ ಮೊಮ್ಮಗ ವಿರೇನ್ ಉಪಸ್ಥಿತರಿದ್ದರು. ನಿಟ್ಟೆ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಕಾರ್ಯಕ್ರಮ ಆಯೋಜಿಸಿದ್ದರು. ವಿನಯ ಹೆಗ್ಡೆ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಅರವಿಂದ ಕುಮಾರ್ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.