ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯ ಕೃಷ್ಣ ಮಠದಲ್ಲಿ ಮಂಗಳವಾರ ಸಂಜೆ ವಿಟ್ಲಪಿಂಡಿ ಉತ್ಸವವು ವಿಜೃಂಭಣೆಯಿಂದ ನೆರವೇರಿತು.
ಸಾವಿರಾರು ಮಂದಿ ಭಕ್ತರು ವಿಟ್ಲಪಿಂಡಿ ಮಹೋತ್ಸವಕ್ಕೆ ಸಾಕ್ಷಿಯಾದರು.
ಮಧ್ಯಾಹ್ನ 3 ಗಂಟೆಗೆಯ ಸುಮಾರಿಗೆ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದ ಬಳಿಕ ಅದನ್ನು ಪಲ್ಲಕ್ಕಿಯಲ್ಲಿ ರಾಜಾಂಗಣಕ್ಕೆ ತಂದು ಚಿನ್ನದ ರಥದಲ್ಲಿರಿಸಿ ಮೆರವಣಿ ಮಾಡಲಾಯಿತು.
ಬಳಿಕ ಮಧ್ವ ಸರೋವರದಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.