ಸೋಮವಾರ, ಆಗಸ್ಟ್ 19, 2019
28 °C

ಸೆಲ್ಫಿ ತೆಗೆದುಕೊಳ್ಳುವಾಗ ಅರ್ಬಿ ಫಾಲ್ಸ್‌ಗೆ ಬಿದ್ದ ಯುವಕ

Published:
Updated:
Prajavani

ಉಡುಪಿ: ಕಾರ್ಕಳ ತಾಲ್ಲೂಕಿನ ನಿಟ್ಟೆಯ ಪರಪ್ಪಾಡಿಯ ಅರ್ಬಿ ಫಾಲ್ಸ್‌ ಬಳಿ ಗುರುವಾರ ಗೆಳೆಯರ ಜತೆ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ನೀರಿಗೆ ಬಿದ್ದು ಸುದೇಶ್‌ ಎಂಬ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ.

ನಂದಳಿಕೆಯ ಅಬ್ಬನಡ್ಕ ಗ್ರಾಮದ ಸುದೇಶ್‌ ಸ್ನೇಹಿತರಾದ ರಾಕೇಶ್, ಭರತ್ ಪೂಜಾರಿ ಹಾಗೂ ಸಂತೋಷ್ ಜತೆ ಫಾಲ್ಸ್‌ ನೋಡಲು ಬಂದಿದ್ದ. ಈ ಸಂದರ್ಭ ಎಲ್ಲರೂ ಒಟ್ಟಾಗಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಸುದೇಶ್ ಹಾಗೂ ಭರತ್ ನೀರಿಗೆ ಬಿದ್ದಿದ್ದಾರೆ. 

ಭರತ್ ಈಜಿ ದಡ ಸೇರಿದರೆ, ಸುದೇಶ್ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋಗಿದ್ದಾರೆ. 150 ಮಂದಿ ಶೋಧ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ. 

ಕಳೆದ 2 ದಿನಗಳಿಂದ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರ್ಬಿ ಫಾಲ್ಸ್‌ ಮೈದುಂಬಿಕೊಂಡಿದ್ದು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ.  

Post Comments (+)