ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯ ನೆರಳಿನ ಕೌತುಕ ವೀಕ್ಷಿಸಿದ ಖಗೋಳಾಸಕ್ತರು

Last Updated 25 ಏಪ್ರಿಲ್ 2021, 14:32 IST
ಅಕ್ಷರ ಗಾತ್ರ

ಉಡುಪಿ: ಶೂನ್ಯ ನೆರಳಿನ ಖಗೋಳ ಕೌತುಕವನ್ನು ಮಂಗಳೂರಿನಲ್ಲಿ ಶನಿವಾರ ಮಧ್ಯಾಹ್ನ 12.28ಕ್ಕೆ ಹಾಗೂ ಭಾನುವಾರ ಉಡುಪಿಯಲ್ಲಿ ಮಧ್ಯಾಹ್ನ 12.29ಕ್ಕೆ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸದಸ್ಯರು ವೀಕ್ಷಿಸಿದರು.

ಮಂಗಳೂರಿನಿಂದ 12.15 ರಿಂದ 12.35ರವರೆಗೆ ಪ್ಯಾಕ್‌ ಯೂ ಟ್ಯೂಬ್ ಚಾನೆಲ್‌ನಲ್ಲಿ ಶೂನ್ಯ ನೆರಳಿನ ಕ್ಷಣಗಳನ್ನು ನೇರ ಪ್ರಸಾರ ಮಾಡಲಾಯಿತು. ಉಡುಪಿಯಿಂದ ಫೇಸ್‌ಬುಕ್‌ ಲೈವ್ ಪ್ರಸಾರ ಮಾಡಲಾಯಿತು. ರಾಜ್ಯದಾದ್ಯಂತ ನೂರಾರು ಮಂದಿ ಶೂನ್ಯ ನೆರಳು ವಿಸ್ಮಯವನ್ನು ಕಣ್ತುಂಬಿಕೊಂಡರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮನೆಯಲ್ಲಿಯೇ ಗೃಹೋಪಯೋಗಿ ವಸ್ತುಗಳನ್ನು ಬಳಸಿಕೊಂಡು ಶೂನ್ಯ ನೆರಳಿನ ಚಿತ್ರಗಳನ್ನು ಸೆರೆ ಹಿಡಿದು ಕಳುಹಿಸಿದ್ದಾರೆ. ಕುಂದಾಪುರ ಹಾಗೂ ಬ್ರಹ್ಮಾವರದಲ್ಲಿ ಈ ವಿದ್ಯಮಾನ ಏ.26 ರಂದು 12.20 ರಿಂದ 12.30ರ ಒಳಗೆ ವೀಕ್ಷಿಸಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT