ಕಾರ್ಕಳ(ಬಜಗೋಳಿ): ಇಲ್ಲಿನ ವೆಂಕಟರಮಣ ದೇವಳದ ಎದುರಿನ ಮುಖ್ಯರಸ್ತೆ ಭಾಗವು ವಾಸ್ತವವಾಗಿ ಮುಖ್ಯರಸ್ತೆ ಆಗಿರದೆ ಅದು ರಥಬೀದಿ ಎಂಬುದೇ ಮುಖ್ಯವಾಗುತ್ತದೆ. ದಶಕಗಳಿಂದ ಇದು ರಥಬೀದಿಯೇ ಆಗಿದ್ದು ಕಾರ್ಕಳದ ಮುಖ್ಯರಸ್ತೆ ಎಂದು ಹೆಸರಿಸುವುದು ಸೂಕ್ತವಲ್ಲ. ವೆಂಕಟರಮಣ ದೇವಳದ ಮುಂಭಾಗದಿಂದ ಮೂರು ಮಾರ್ಗ ಸಮೀಪದ ಮಣ್ಣಗೋಪುರ ದೇವರಕಟ್ಟೆಯವರೆಗೆ ರಸ್ತೆ ರಥಬೀದಿಯೇ ಆಗಿದ್ದು ಇದನ್ನು ಯಥಾಸ್ಥಿತಿ ಕಾಯ್ದುಕೊಂಡು ಬರುವ ಜವಾಬ್ದಾರಿ ಭಜಕ ವೃಂದದ ಮೇಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಬೇಸಿಗೆಯ 4 ತಿಂಗಳು ಪ್ರತಿದಿನ ಎಂಬಂತೆ ನಿತ್ಯ ಉತ್ಸವ ನಡೆಯುತ್ತದೆ. ಗರುಡ ವಾಹನ, ಅಶ್ವವಾಹನ, ರಜತಪಾಲಕಿ, ಸ್ವರ್ಣಪಾಲಕಿ, ರಥೋತ್ಸವಗಳು ಸಾಗುವುದಕ್ಕಾಗಿಯೇ ಈ ರಥಬೀದಿ ಇರುವುದು ಮಾತ್ರವಲ್ಲ. ದೀಪೋತ್ಸವ, ರಥೋತ್ಸವ ಸಂದರ್ಭ ದೇವಸ್ಥಾನದಿಂದ ಮಣ್ಣಗೋಪುರದವರೆಗೆ 5 ಕಡೆ ಗುರ್ಜಿ ರಥಸ್ಥಾಪನೆ ಮತ್ತು ಗುರ್ಜಿ ಉತ್ಸವಗಳು ನಡೆಯುತ್ತಿದ್ದು ಇದು ಉತ್ಸವಕ್ಕೆ ಮೀಸಲಾಗಿರುವ ರಸ್ತೆ. ಇದೀಗ ರಸ್ತೆಯನ್ನು ಮುಖ್ಯರಸ್ತೆಯಾಗಿ ಪರಿವರ್ತಿಸಿ ದ್ವಿಪಥಗೊಳಿಸುವುದಾಗಲೀ, ಅಗಲಗೊಳಿಸುವುದಾಗಲೀ ಅಗತ್ಯವಿಲ್ಲ.

ಕಾರ್ಕಳ ರಥಬೀದಿಯನ್ನು ಉಡುಪಿ ರಥಬೀದಿಯನ್ನು ಕೊಂಚ ಮಟ್ಟಿಗೆ ಮಾದರಿಯಾಗಿಸಿ ಸಂಪೂರ್ಣವಾಗಿ ಬಸ್ ಮತ್ತು ಭಾರಿ ವಾಹನ ಮುಕ್ತವಲಯವಾಗಿ ಪೋಷಿಸಬೇಕು ಎಂದು ರಮಾನಂದ ಒತ್ತಾಯಿಸಿದ್ದಾರೆ. ಕಾರ್ಕಳ ಪೇಟೆಗೆ ಬದಲು ರಥಬೀಧಿ ಹೊರತುಪಡಿಸಿ ಪರ್ಯಾಯ ರಸ್ತೆಗಳಿದ್ದು ರಥಬೀದಿಯನ್ನು ಸುತ್ತು ಬಳಸುವ ಅಗತ್ಯವೇ ಇಲ್ಲ. ಮುಂದೆ ಕಾರ್ಕಳ ಮಾರಿಗುಡಿ ಮತ್ತು ಅನಂತಶಯನ ದೇವಸ್ಥಾನಗಳು ಹಾಗೂ ಅದರಿಂದ ಕೆಳಗೆ ಜೈನ ಸಂಪ್ರದಾಯದ ಚತುರ್ಮುಖ ಬಸದಿ, ಬಾಹುಬಲಿ ಬೆಟ್ಟಗಳಿದ್ದು ಕಾರ್ಕಳದ ಇಡೀ ಮುಖ್ಯರಸ್ತೆಯೇ ತಲೆಯಿಂದ ತಲೆವರೆಗೆ ದೇವಳದ ಉತ್ಸವಗಳಿಗಾಗಿಯೇ ಇರುವ ರಸ್ತೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಆದ್ದರಿಂದ ಕಾರ್ಕಳ ಬಸ್ಸ್ಟ್ಯಾಂಡನ್ನು ಬಂಡೀಮಠ ಅಥವಾ ಆನೆಕೆರೆ ಕಡೆಗೆ ಸ್ಥಳಾಂತರಿಸಿ ಸಂಚಾರ ವ್ಯವಹಾರಕ್ಕಾಗಿ ಕಾರ್ಕಳ ಹೊರವಲಯದಲ್ಲಿ ಇರುವ ಮುಖ್ಯರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಕುಂಟಲ್ಪಾಡಿ ಎಸಿಎಂಸಿ ಕಟ್ಟಡದಿಂದ ಕಾರ್ಕಳದ ಆನೆಕೆರೆ ಮಸೀದಿಯವರೆಗೆ ಅಗತ್ಯವಿದ್ದಲ್ಲಿ ಭೂಸ್ವಾದೀನ ಪಡಿಸಿಕೊಂಡು ಹೊಸ ಟೌನ್ಶಿಪ್ ನಿರ್ಮಾಣ ಮಾಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಆನೆಕೆರೆ ಸಮೀಪದಿಂದ ಪ್ರತ್ಯೇಕ ರಸ್ತೆ ನಿರ್ಮಿಸಿ ಈಗಿರುವ ಕಾರ್ಕಳ ಪೇಟೆಯ ಅಗತ್ಯವೇ ಇಲ್ಲದೆ, ಸಂಚಾರ ವ್ಯವಹಾರ ನಡೆಯಲು ಸಾಧ್ಯವಿರುವುದರಿಂದ ಕುಂಟಲ್ಪಾಡಿಯಿಂದ ಕಾರ್ಕಳ ತಾಲೂಕು ಕಚೇರಿ ಮತ್ತು ಜೋಡುರಸ್ತೆ ವರೆಗೆ ಇಕ್ಕೆಲಗಳಲ್ಲಿ ಸುಂದರ ಕಾರ್ಕಳ ನಗರ ನಿರ್ಮಾಣ ಕಷ್ಟವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.ರಸ್ತೆ ವಿಸ್ತರಣೆ ವೆಚ್ಚ, ಆಗುವ ನಷ್ಟ, ಆಸ್ತಿ-ಪಾಸ್ತಿ ವ್ಯವಹಾರ ಹಾನಿ ಲೆಕ್ಕ ಹಾಕಿದರೆ ಹೊಸ ಟೌನ್ಶಿಪ್ ನಿರ್ಮಾಣ ದುಬಾರಿಯಾಗದು ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.