ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ ಸಚಿವ ಸ್ಥಾನ ವಂಚಿತ: ಪ್ರತಿಭಟನೆ

Last Updated 13 ಜುಲೈ 2012, 8:20 IST
ಅಕ್ಷರ ಗಾತ್ರ

ಹಾಲಾಡಿ (ಸಿದ್ದಾಪುರ): ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ವಂಚಿತರಾದ ಬಗ್ಗೆ ಆಕ್ರೋಶಗೊಂಡ ಹುಟ್ಟೂರು ಹಾಲಾಡಿ ಹಾಗೂ ಪ್ರಮುಖ ಪಟ್ಟಣಗಳಾದ ಬಿದ್ಕಲಕಟ್ಟೆ, ಗೋಳಿಯಂಗಡಿಯ ಬೆಂಬಲಿಗರು ಗ್ರಾಮೀಣ ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು.

ಹಾಲಾಡಿ ಶ್ರಿನಿವಾಸ ಶೆಟ್ಟಿ ಮನೆ ಸಮೀಪದ ಹಾಲಾಡಿ ಪೇಟೆಯಲ್ಲಿ ಮಧ್ಯಾಹ್ನ ಶಾಸಕ ಸ್ಥಾನ ವಂಚಿತರಾದ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿರಾಜಪೇಟೆ- ಬೈಂದೂರು ಹೆದ್ದಾರಿ ತಡೆ ನಡೆಸಿ ಟೈರ್ ಸುಟ್ಟು ಪ್ರತಿಭಟಿಸಿ, ಸುಮಾರು 2 ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.

ಹಾಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜ ಗೋಳಿ, ಉಪಾಧ್ಯಕ್ಷ ಗಣೇಶ ಶೆಟ್ಟಿ, ಬಿದ್ಕಲ್ ಕಟ್ಟೆ ಮನೋಜ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ ಆರ್ಡಿ, ಸತೀಶ್ ಶೆಟ್ಟಿ ಗುಡ್ಡೆಯಂಗಡಿ, ಕೃಷ್ಣ ಭಟ್ ಹಾಲಾಡಿ, ಬಾಬಣ್ಣ ಹಾಲಾಡಿ, ಬೋಜರಾಜ ಕುಲಾಲ್, ಭುಜಂಗ ಹೆಗ್ಡೆ ಹಾಲಾಡಿ, ಮೋಹನ್ ಕಾಮತ್ ಏಜೆಂಟ್, ವಸಂತ ಶೆಟ್ಟಿ ಹಾಲಾಡಿ  ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಹಾಲಾಡಿಯಲ್ಲಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಬಿದ್ಕಲ್‌ಕಟ್ಟೆ: ಬಿದ್ಕಲ್‌ಕಟ್ಟೆಯಲ್ಲಿ ನೂರಾರು ಕಾರ್ಯಕರ್ತರು ಮತ್ತು ಪಂಚಾಯಿತಿ ಪ್ರತಿನಿಧಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬಿದ್ಕಲ್‌ಕಟ್ಟೆ ವೃತ್ತದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ಪೇಟೆ ಬಂದ್ ಆಗಿತ್ತು. ಗೋಳಿಯಂಗಡಿ ಮತ್ತು ಅಲ್ಬಾಡಿ ಮೂರುಕೈ, ಬೆಳ್ವೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಸ್ತೆಯಲ್ಲಿ ಪ್ರತಿಭಟನಾಗಾರರು ಟೈರ್ ಸುಟ್ಟು ಪ್ರತಿಭಟಿಸಿದರು.

ಮಂದಾರ್ತಿ ಸಮೀಪದ ಶಿರೂರು ಮೂರುಕೈ, ವಂಡಾರುವಿನಲ್ಲಿ ನೂರಾರು ಕಾರ್ಯಕರ್ತರು ಮಂದಾರ್ತಿ- ಗೋಳಿಯಂಗಡಿ ರಸ್ತೆಯಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.


ಪಕ್ಷದ ಪ್ರಮುಖರಾದ ವಂಡಾರು ಪ್ರವೀಣ್ ಶೆಟ್ಟಿ, ಆವರ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷ, ಪ್ರಮೋದ್ ಹೆಗ್ಡೆ ಸಂತೋಷ್ ಶೆಟ್ಟಿ, ಅಶೋಕ್ ಶೆಟ್ಟಿ, ಮಾಣಿ ಮಾಸ್ತರ್, ಉದಯ್ ನಾಯಕ್ ದಿನೇಶ್ ಪೂಜಾರಿ ನೇತೃತ್ವವನ್ನು ವಹಿಸಿಕೊಂಡಿದ್ದರು.


ಬಿಜೆಪಿ ಮುಖಂಡ ಎ.ಜಿ. ಕೊಡ್ಗಿ ಸ್ವಗ್ರಾಮ ಅಮಾಸೆಬೈಲು ಪೇಟೆಯಲ್ಲಿ ಸಂಪೂರ್ಣ ಬಂದ್ ಆಗಿದ್ದು, ತಾಲ್ಲೂಕು ಪಂಚಾಯಿತಿ ಸದಸ್ಯ ನವೀನಚಂದ್ರ ಶೆಟ್ಟಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಆಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.


ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಶಾಸಕ ಸ್ಥಾನ ಸಿಗುತ್ತದೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಬುಧವಾರ ಸಂಜೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿತ್ತು.

ಕೊನೆ ಕ್ಷಣದ ಬದಲಾವಣೆಯಲ್ಲಿ ವಂಚಿತರಾದ ಗೊಳಿಯಂಗಡಿ ಬಿಜೆಪಿ ಪ್ರಮುಖರು ಪ್ರಮುಖ ಗೋಳಿಯಂಗಡಿ ಪೇಟೆಯಲ್ಲಿ ಭಜರಂಗದಳ ಜಿಲ್ಲಾ ಸಹಸಂಚಾಲಕ ವಿಜಯಕುಮಾರ ಶೆಟ್ಟಿ, ವೈ. ಬಾಲಕೃಷ್ಣ ಶೆಟ್ಟಿ, ಸಂದೀಪ್ ಶೆಟ್ಟಿ, ಸುರ್ಗೋಳಿ ಚಂದ್ರ ಶೇಖರ್ ಶೆಟ್ಟಿ, ಉದಯ ಜೋಗಿ, ಶ್ರೀಧರ್ ಆಚಾರ್ಯ, ಪ್ರಸಾದ ಶೆಟ್ಟಿ ಅಲ್ಬಾಡಿ, ಕಿಶೋರ್ ಶೆಟ್ಟಿ ಹರೀಶ್ ಶೆಟ್ಟಿ, ಸುರೇಂದ್ರ ನಾಯ್ಕ, ಅಕ್ಷತ್ ಕುಮಾರ  ರಸ್ತೆತಡೆ ಮಾಡಿದರು.

ತಪ್ಪಿದ ಸಚಿವ ಸ್ಥಾನ: ಹೆಬ್ರಿಯಲ್ಲಿ ಪ್ರತಿಭಟನೆ
ಹೆಬ್ರಿ:
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮಂತ್ರಿಪಟ್ಟ ಮಂತ್ರಿ ಮಂಡಳದಲ್ಲಿ ಸ್ಥಾನ ಸಿಗದೇ ಇರುವುದನ್ನು ಖಂಡಿಸಿ ಬಿಜೆಪಿ ವಿರುದ್ಧ ಹೆಬ್ರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಹಾಲಾಡಿ ಅಭಿಮಾನಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಂ. ಪ್ರಸನ್ನ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿಯ ಮೋಸದ ರಾಜಕೀಯವನ್ನು ಖಂಡಿಸಿದರು. ಸೀತಾನದಿ ರಮೇಶ ಹೆಗ್ಡೆ, ಜಕ್ಕನಮಕ್ಕಿ ಧೀರಜ್ ಕುಮಾರ್ ಶೆಟ್ಟಿ, ಸುರೇಶ ಭಂಡಾರಿ ಇದ್ದರು.

ಮುನಿಯಾಲು: ಬಿಜೆಪಿಗೆ ರಾಜೀನಾಮೆ
ಹೆಬ್ರಿ:
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ವಂಚನೆ ಮಾಡಿರುವುದನ್ನು ಕಂಡು ಮನನೊಂದ ಹೆಬ್ರಿ ಸಮೀಪದ ಮುನಿಯಾಲಿನ ವರಂಗ ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಪಂಚಾಯತಿ ಅಧ್ಯಕ್ಷ ದಿನೇಶ ಪೈ, ಪಕ್ಷದ ಮುಖಂಡರಾದ ಪೂಜಾ ಶಂಕರ ಶೆಟ್ಟಿ ಮತ್ತಿತರರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT