ಹೆಬ್ರಿ: ಮುದ್ರಾಡಿ ಪಂಚಾಯಿತಿ ವ್ಯಾಪ್ತಿ ಬಲ್ಲಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುವರ್ಣ ಮಹೋತ್ಸವವನ್ನು ಶಾಸಕ ಎಚ್. ಗೋಪಾಲ ಭಂಡಾರಿ ಭಾನುವಾರ ಉದ್ಘಾಟಿಸಿದರು.

ಬಲ್ಲಾಡಿಯಲ್ಲಿ 5 ದಶಕಗಳ ಹಿಂದೆ ಜಾಗ, ಕಟ್ಟಡ, ಮೂಲ ಸೌಕರ್ಯ ಇಲ್ಲದ ಸಂದರ್ಭ ಶಾಲೆ ಆರಂಭಿಸಿ ಊರಿಗೆ ವಿದ್ಯೆ ನೀಡಿದ ಗ್ರಾಮದ ಹಿರಿಯರನ್ನು ಅಭಿನಂದಿಸಿದರು. ಸರ್ಕಾರಿ ಕನ್ನಡ ಶಾಲೆಗಳಿಗೆ ಇದೀಗ ಸವಲತ್ತು ಕೊರತೆ ಇಲ್ಲ. ಬದಲಾಗಿ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ ಅದನ್ನು ಉತ್ತಮ ಶಿಕ್ಷಣ ನೀಡುವ ಶಿಕ್ಷಕರ ಮೂಲಕ ನೀಗಿಸಿ, ಶಾಲೆಯ ಬೆಳವಣಿಗೆಗೆ ಸಹಕರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಕೆ. ಚಂದ್ರಶೇಖರ ಬಾಯರಿ ಮಾತನಾಡಿ, ಶಾಲೆಯ ಸುವರ್ಣ ರಂಗಮಂದಿರ, ಆವರಣಗೋಡೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಜಿ.ಪಂ ಸದಸ್ಯ ಎಂ. ಮಂಜುನಾಥ ಪೂಜಾರಿ, ತಾ.ಪಂ ಸದಸ್ಯೆ ವಿಶಾಲಾಕ್ಷಿ ಶೆಟ್ಟಿ, ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಪೂಜಾರ್ತಿ, ಗುಂಡಾಳ ಸದಾಶಿವ ಶೆಟ್ಟಿ, ಪಂಚಾಯಿತಿ ಸದಸ್ಯರು, ಶಿಕ್ಷಕರ ಸಂಘ ಅಧ್ಯಕ್ಷ ರವೀಂದ್ರ ಹೆಗ್ಡೆ, ಉದ್ಯಮಿ ಮೂರ‌್ಸಾಲು ಮೋಹನದಾಸ್ ನಾಯಕ್, ಸೇವಾನಿರತ ಸಂತೋಷ್ ಪೂಜಾರಿ, ರಾಜೀವಿ ಹೆಗ್ಡೆ, ಪಂಚಾಯಿತಿ ಮಾಜಿ ಅಧ್ಯಕ್ಷ ಜಯಕರ ಶೆಟ್ಟಿ, ಉದ್ಯಮಿ ರಾಜ್‌ಗೋಪಾಲ, ನರಸಿಂಹ ಎಸ್., ಸಂತೋಷ್ ಕುಮಾರ್ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಶ್ರಿಧರ ಕುಲಾಲ್, ಮುಖ್ಯಶಿಕ್ಷಕಕ ಶ್ರಿಪತಿ ಬಡ್ಕಿಲ್ಲಾಯ, ಶಿಕ್ಷಕ ಪ್ರಕಾಶ್ ಪೂಜಾರಿ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ದಿವಾಕರ ಆಚಾರ್ಯ, ಶಿಕ್ಷಕ ಗಣಪತಿ ನಾಯಕ್ ಮತ್ತಿತರರು ಇದ್ದರು.

ಶಾಲೆಯಲ್ಲಿ ಸೇವೆ ಸಲ್ಲಿಸಿದ ವೇದಾವತಿ, ಗಣೇಶ್ ಭಟ್, ಅಂಚೆ ಪೇದೆ ಮುದ್ದಣ್ಣ ಪೂಜಾರಿ, ನಾಟಿ ತಜ್ಞೆ ಸಣ್ಣಕ್ಕ ಪೂಜಾರ್ತಿ ಮೊದಲಾದವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಬಳಿಕ ಸುಧನ್ವ ಮುದ್ರಾಡಿ, ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಮನೋರಂಜನಾ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.