ಬೈಂದೂರು: ರಾಮಾಯಣದಿಂದ ಆರಂಭವಾಗಿ ಇಂದಿನ ವರೆಗೆ ರಚನೆಯಾದ ಸಾಹಿತ್ಯ ಸಾರ್ವಜನಿಕ ಬದುಕು, ಆಡಳಿತ, ರಾಜಕಾರಣದ ವಿವಿಧ ಆಯಾ ಮಗಳ ಕುರಿತು ವ್ಯಾಖ್ಯಾನ, ನಿಲುವುಗಳನ್ನು ಪ್ರಕಟಿಸುತ್ತ ಬಂದಿದೆ. ಸಾಮಾ ಜಿಕ ತಲ್ಲಣ, ಶೋಷಣೆ, ತಾರತಮ್ಯಗಳಿಗೆ ಧ್ವನಿಯಾಗಿದೆ. ರಾಜಕಾರಣದ ಹೊಳವು ಗಳಿಲ್ಲದ ಸಾಹಿತ್ಯವೇ ಇಲ್ಲ ಎಂದು ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಾ. ಬಿ. ಎಲ್. ಶಂಕರ್ ಹೇಳಿದರು.

ಬಸ್ರೂರು ಶಾರದಾ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕುಂದಾಪುರದ ಸಮುದಾಯದ ಸಹಯೋಗದಲ್ಲಿ ಗುರುವಾರ ನಡೆದ ಒಂದು ದಿನದ ಯುಜಿಸಿ ಪ್ರಾಯೋಜಿತ ’ಕರ್ನಾಟಕ ರಾಜ ಕಾರಣ: ಸಾಹಿತ್ಯಕ–ಸಾಂಸ್ಕೃತಿಕ ಗ್ರಹಿಕೆ ಗಳು’ ಮೇಲಣ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ರಾಜ್ಯಶಾಸ್ತ್ರವನ್ನು ಮಾನವ ಸ್ವಭಾ ವದ ಅಧ್ಯಯನ ಎಂದು ವ್ಯಾಖ್ಯಾನಿಸ ಲಾಗುತ್ತದೆ. ಸಾಹಿತ್ಯವೂ ಅದೇ ಕೆಲಸ ಮಾಡುವುದರಿಂದ ಎರಡರ ವಸ್ತು ಒಂದೇ ಆಗಿದೆ. ಎಲ್ಲ ಸಾಹಿತ್ಯ ಕೃತಿಗಳಲ್ಲೂ ರಾಜಕಾರಣದ ಬಗೆಗಿನ ಒಲವು, ನಿಲುವುಗಳು ಕಂಡುಬರುತ್ತವೆ ಎಂದ ಅವರು ಬುದ್ಧ, ಬಸವಣ್ಣರಿಂದಾರಂಭಿಸಿ ಕೌಟಿಲ್ಯ, ಪಂಪ, ಕುವೆಂಪು ಇನ್ನಿತರ ಸಮಕಾಲೀನ ಲೇಖಕರ ಬರಹಗಳ ಹತ್ತಾರು ನಿದರ್ಶನಗಳನ್ನು ಮುಂದಿಟ್ಟರು.

ಅವರೆಲ್ಲರೂ ಅಕ್ಷರ ಕ್ರಾಂತಿಯ ಮೂಲಕ ಸಾಂಸ್ಕೃತಿಕ ಕ್ರಾಂತಿ ಮಾಡಿದರು. ಪ್ರಜಾತಂತ್ರದ ಹುಟ್ಟಿಗೆ ಮೊದ ಲಾದುದು ಇಂಗ್ಲಂಡಿನ ಮೆಗ್ನಕಾರ್ಟ ಎನ್ನಲಾಗುತ್ತದೆ. ಅದರ ಪೂರ್ವದಲ್ಲೇ ಅನುಭವ ಮಂಟಪದ ಸ್ಥಾಪನೆಯಾಗಿತ್ತು. ಅದು ಸಂಸತ್ತಿನ ಮಾದರಿಯಲ್ಲಿತ್ತು. ವಚನಗಳು ಅದರ ಸಂವಿಧಾನವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಕಾಲೇಜಿನ ಸಂಚಾಲಕ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಸಮುದಾಯದ ಕಲಾವಿದರು ಭಾವೈ ಕ್ಯಗಾನ ಹಾಡಿದರು. ಪ್ರಾಂಶುಪಾಲ ಕೆ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ವಿಚಾರ ಸಂಕಿರಣದ ಸಂಚಾಲಕ ಡಾ. ದಿನೇಶ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ಅಧ್ಯಕ್ಷ ಉದಯ ಗಾಂವ್ಕಾರ್ ವಂದಿಸಿದರು. ಕನ್ನಡ ಉಪನ್ಯಾಸಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ನಿರೂಪಿಸಿದರು. ಐಸಿಎಸ್‌ಆರ್ ರಾಷ್ಟ್ರೀಯ ಫೆಲೊ ವಲೇರಿಯನ್ ರಾಡ್ರಿಗಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.