25 ನಿಮಿಷದಲ್ಲಿ ಸಾವಿರ ಮೀಟರ್ ಈಜು!: ಆರರ ಪೋರನ ಸಾಧನೆಗೆ ತರಬೇತುದಾರರೂ ನಿಬ್ಬೆರಗು

ಸೋಮವಾರ, ಏಪ್ರಿಲ್ 22, 2019
33 °C

25 ನಿಮಿಷದಲ್ಲಿ ಸಾವಿರ ಮೀಟರ್ ಈಜು!: ಆರರ ಪೋರನ ಸಾಧನೆಗೆ ತರಬೇತುದಾರರೂ ನಿಬ್ಬೆರಗು

Published:
Updated:
Prajavani

ಮುಂಡಗೋಡ: ಅವನದ್ದು ಮನೆ ಅಂಗಳದಲ್ಲಿ ಆಟವಾಡುವ ವಯಸ್ಸು. ಆದರೆ, ವಯಸ್ಸಿಗೂ ಮೀರಿದ ಸಾಧನೆ ಈ ಆರರ ಪೋರನದ್ದು. ಮೂರನೇ ವಯಸ್ಸಿಗೆ ಈಜು ಕಲಿಯಲು ನೀರಿಗಿಳಿದ. ತರಬೇತುದಾರರು ಅಚ್ಚರಿಪಡುವಂತೆ ಸಾಧನೆ ಮಾಡುತ್ತ, ಈಜು ಕ್ರೀಡೆಯಲ್ಲಿ ಭರವಸೆ ಮೂಡಿಸಿದ್ದಾನೆ.

ತಾಲ್ಲೂಕಿನ ಚಿಗಳ್ಳಿ ಗ್ರಾಮದ ಬಿಎಸ್‌ಎಫ್ ಯೋಧ ಶಂಭುಲಿಂಗ ಶಿವಾಜಿ ಕೀರ್ತೆಪ್ಪನವರ್ ಅವರ ಪುತ್ರ ಓಂಕಾರ ಈಜಿನಲ್ಲಿ ಹೆಸರು ಮಾಡುತ್ತಿರುವ ಬಾಲಕನಾಗಿದ್ದಾನೆ. ಸದ್ಯ ಬೇಸಿಗೆ ರಜೆಗೆಂದು ಸ್ವಗ್ರಾಮಕ್ಕೆ ಬಂದಿದ್ದಾನೆ.

ರಾಜಸ್ಥಾನದ ಜೋಧಪುರದಲ್ಲಿ ಯೋಧ ಶಂಭುಲಿಂಗ ಸೇವೆ ಸಲ್ಲಿಸುತ್ತಿದ್ದು, ಅಲ್ಲಿನ ಸೇನಾ ವಸತಿ ಆವರಣದಲ್ಲಿರುವ ಈಜುಕೊಳದಲ್ಲಿ ಓಂಕಾರ ತರಬೇತಿ ಪಡೆಯುತ್ತಿದ್ದಾನೆ. ಈಗಾಗಲೇ 14 ವರ್ಷದ ಒಳಗಿನ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗೆದ್ದುಕೊಂಡಿದ್ದಾನೆ.

‘ಸೇನಾಧಿಕಾರಿಗಳ, ಯೋಧರ ಮಕ್ಕಳು ಈಜು ಕಲಿಯುತ್ತಿರುವುದನ್ನು ಪ್ರತಿದಿನ ವೀಕ್ಷಿಸುತ್ತಿದ್ದ. ಈತನೂ ಕಲಿಯಬಹುದು ಎಂದು ತರಬೇತಿ ಕೊಡಿಸಲಾಯಿತು. ಆದರೆ, ತರಬೇತುದಾರರ ನಿರೀಕ್ಷೆಗೂ ಮೀರಿ ಸಾಧನೆ ಮಾಡುತ್ತಿದ್ದ. ಸದ್ಯ ಮೂರು ಗಂಟೆ ನಿರಂತರ ಅಭ್ಯಾಸ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. 32 ನಿಮಿಷ ಫ್ರೀಸ್ಟೈಲ್‌ನಲ್ಲಿ ಈಜುತ್ತಾನೆ’ ಎನ್ನುತ್ತಾರೆ ಬಾಲಕನ ತಂದೆ ಶಂಭುಲಿಂಗ.

Tags: 

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !