ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಸೋದೆಯಲ್ಲಿ ವಿಶ್ವಪ್ರಿಯ ತೀರ್ಥರ ಆರಾಧನೆ

Last Updated 20 ಜುಲೈ 2020, 12:01 IST
ಅಕ್ಷರ ಗಾತ್ರ

ಶಿರಸಿ: ಆಷಾಢ ಬಹುಳ ಅಮವಾಸ್ಯೆಯಂದು ಸೋಮವಾರ ತಾಲ್ಲೂಕಿನ ಸೋದೆ ವಾದಿರಾಜ ಮಠದ ಪರಂಪರೆಯಲ್ಲಿ ತಪಸ್ವಿ ಯತಿಗಳಾದ, ವೃಂದಾವನಾಚಾರ್ಯ ವಿಶ್ವಪ್ರಿಯ ತೀರ್ಥರು ಹಾಗೂ ಅವರ ಶಿಷ್ಯರಾದ ವಿಶ್ವಾಧೀಶ ತೀರ್ಥರ ಆರಾಧನೆ ನಡೆಯಿತು.

ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಮಠಾಧೀಶ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಭೀಮನಕಟ್ಟೆ ಮಠದ ರಘುವರೇಂದ್ರ ತೀರ್ಥ ಸ್ವಾಮೀಜಿ ಅವರು ಮೃತ್ತಿಕಾ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ವಾದಿರಾಜ ಜಮಖಂಡಿ ಅವರು ವೃಂದಾವನಾಚಾರ್ಯರ ಜೀವನ ಚರಿತ್ರೆಯ ಕುರಿತು ಉಪನ್ಯಾಸ ನೀಡಿದರು. ಶ್ರೀದ್ವಯರು ಆಶೀರ್ವಚನ ನೀಡಿದರು.

ಉಡುಪಿ ಕೃಷ್ಣ ಮಠದ ವೃಂದಾವನ ಸಮುಚ್ಚಯದಲ್ಲಿರುವ ಮೂಲ ವೃಂದಾವನ ಸನ್ನಿಧಿಯಲ್ಲಿ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT