ಗುರುವಾರ , ಮೇ 6, 2021
22 °C

ಟಿಪ್ಪರ್, ಲಾರಿ ನಡುವೆ ಸಿಲುಕಿದ ಬೊಲೆರೊ; ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ತಾಲ್ಲೂಕಿನ ಅರಬೈಲಿನಲ್ಲಿ ಮಂಗಳವಾರ ನಡೆದ ಅಪಘಾತದಲ್ಲಿ ಟಿಪ್ಪರ್ ಹಾಗೂ ಲಾರಿಯ ನಡುವೆ ಸಿಲುಕಿದ ಬೊಲೆರೊ ವಾಹನವು ಅಪ್ಪಚ್ಚಿಯಾಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಬಳಿಯ ಬಿದರಿ ನಿವಾಸಿಗಳಾದ ರಾಜೇಶ್ವರಿ ಪರಡ್ಡಿ (35), ಚಿಕ್ಕಮ್ಮ ಪಾಟೀಲ್ (30) ಮೃತರು. ಇವರಲ್ಲಿ ಒಬ್ಬರು ಸ್ಥಳದಲ್ಲೇ ಸಾವಿಗೀಡಾದರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಬೊಲೆರೊದಲ್ಲಿದ್ದ ಲಕ್ಷ್ಮಿ, ಶ್ರುತಿ, ಹನುಮಂತ, ಆಕಾಶ್, ಅಪೇಕ್ಷಾ, ತಿಮ್ಮನ ಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಸ ಬೊಲೊರೊವನ್ನು ಖರೀದಿಸಿ ಕುಟುಂಬದ ಸಮೇತ ಧರ್ಮಸ್ಥಳ ಯಾತ್ರೆಗೆ ತೆರಳುತ್ತಿದ್ದರು. ಅರಬೈಲ್ ಘಟ್ಟದಲ್ಲಿ, ಅರಬೈಲ್ ಊರು ಸಮೀಪಸುತ್ತಿದ್ದಾಗ ಹಿಂದಿನಿಂದ ಬಂದ ಲಾರಿಯು ಬೊಲೆರೊಕ್ಕೆ ಡಿಕ್ಕಿಯಾಯಿತು. ಆಗ ಬೊಲೆರೊ, ಮುಂದೆ ಮಣ್ಣು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್‌ಗೆ ಡಿಕ್ಕಿಯಾಯಿತು. ಎರಡೂ ವಾಹನದ ನಡುವೆ ಸಿಲುಕಿದ ಸಂಪೂರ್ಣ ನಜ್ಜುಗುಜ್ಜಾಯಿತು.

ಸ್ಥಳಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ್ ಯಳ್ಳೂರ್ ಹಾಗೂ ಪಿ.ಎಸ್.ಐ. ಮಂಜುನಾಥ ಗೌಡರ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು