ಭಾನುವಾರ, ಮಾರ್ಚ್ 26, 2023
23 °C

ಅಡಿಕೆ ಮಾರುಕಟ್ಟೆಗೆ ಸಹಕಾರ ಸಚಿವರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸೋಮವಾರ ಇಲ್ಲಿನ ಟಿಎಸ್ಎಸ್ ಸಂಸ್ಥೆಯ ಅಡಿಕೆ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರ ಚಟುವಟಿಕೆ ಮತ್ತು ವಿವಿಧ ಬಗೆಯ ಅಡಿಕೆಯ ಕುರಿತು ತಿಳಿದುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕೆಂಪಡಿಕೆ, ಚಾಲಿ ಇನ್ನಿತರ ಅಡಿಕೆಯ ಕುರಿತು ಸಚಿವರಿಗೆ ವಿವರಿಸಿದರು. ಬಳಿಕ ಸುಪರ್ ಮಾರ್ಕೆಟ್ ವೀಕ್ಷಣೆಯನ್ನೂ ನಡೆಸಿದರು.

‘ಸಹಕಾರ ಕ್ಷೇತ್ರ ಈಚೆಗೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ನಡುವೆಯೂ ಟಿಎಸ್ಎಸ್‍ನಂತಹ ಸಂಸ್ಥೆ ನಿರಂತರ ಪ್ರಗತಿ ಕಾಣುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಸಚಿವ ಸೋಮಶೇಖರ್ ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ರಾಮಕೃಷ್ಣ ಎಸ್.ಹೆಗಡೆ ಕಡವೆ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.