ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರದ ಹಣ ನೀಡಲು ವಿಫಲ: ಬಸ್ ಜಪ್ತಿ

Last Updated 10 ಮಾರ್ಚ್ 2022, 14:57 IST
ಅಕ್ಷರ ಗಾತ್ರ

ಹೊನ್ನಾವರ: ಅಪಘಾತ ವಿಮೆ ಪರಿಹಾರ ನೀಡಲು ವಿಫಲವಾದ ಕಾರಣ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ್ನು ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯದ ಸಿಬ್ಬಂದಿ ಬುಧವಾರ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

2014ರ ಫೆ.4ರಂದು ಪಟ್ಟಣದಲ್ಲಿ ನಡೆದಿದ್ದ ಅಪಘಾತದಲ್ಲಿ, ಬಾಗಲಕೋಟೆ ಡಿಪೊಗೆ ಸೇರಿದ ಬಸ್, ಬೈಕ್ ಸವಾರ ಗಣಪತಿ ಮೇಸ್ತ ಎಂಬುವವರಿಗೆ ಡಿಕ್ಕಿಯಾಗಿತ್ತು. ಅವರು ಮೃತಪಟ್ಟಿದ್ದರು. ನ್ಯಾಯಾಲಯ ಅದೇಶ ಮಾಡಿದ್ದರೂ ಸಾರಿಗೆ ಸಂಸ್ಥೆಯು ಮೃತರ ಕುಟುಂಬಕ್ಕೆ ಪರಿಹಾರದ ಪೂರ್ತಿ ಹಣವನ್ನು ಪಾವತಿಸಿರಲಿಲ್ಲ. ಹಾಗಾಗಿ ಅದೇ ಡಿಪೊದ ಬಸ್ಸನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು.

ಜೂಜು: ಆರು ಜನರ ವಿರುದ್ಧ ದೂರು

ಹೊನ್ನಾವರ: ಓಸಿ ಜೂಜಾಟಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

ಪಿ.ಎಸ್.ಐ ಶಶಿಕುಮಾರ ದೂರು ನೀಡಿದ್ದಾರೆ. ಆರೋಪಿಗಳಿಂದ ₹ 8 ಸಾವಿರ ನಗದು, ಮೊಬೈಲ್ ಫೋನ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT