ಶನಿವಾರ, ಅಕ್ಟೋಬರ್ 23, 2021
22 °C

ಯಲ್ಲಾಪುರ: ಚೂರಿಯಿಂದ ಇರಿದು ಅಂಗನವಾಡಿ ಸಹಾಯಕಿಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ತಾಲ್ಲೂಕಿನ ಶಿರಸಿ ರಸ್ತೆಯ ಗಡಿ ಭಾಗವಾದ ತುಡುಗುಣಿಯಲ್ಲಿ ಮಹಿಳೆಯೊಬ್ಬರನ್ನು ಗುರುವಾರ ರಾತ್ರಿ ಚೂರಿಯಿಂದ ಇರಿದು ಕೊಲೆ‌ ಮಾಡಲಾಗಿದೆ. ಕೊಲೆಯಾದವರನ್ನು ಸರೋಜಿನಿ ನಾಯರ್ (45) ಎಂದು ಗುರುತಿಸಲಾಗಿದೆ.

ಸರೋಜಿನಿ, ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಅವರ ತಂಗಿಯನ್ನು ಗುರಿಯಾಗಿಸಿಕೊಂಡು ಕೊಲೆಗಾರ ಬಂದಿದ್ದ ಎನ್ನಲಾಗಿದೆ. ಮನೆಯಲ್ಲಿ ಅವರು ತಂಗಿ, ತಾಯಿ ಹಾಗೂ ತಂಗಿಯ ಮಗನ ಜೊತೆ ಇರುತ್ತಿದ್ದರು. ಅವರ ತಂಗಿ ಬೆಳಿಗ್ಗೆಯೇ ಎಲ್ಲಿಯೋ ಹೋಗಿದ್ದರು ಎನ್ನಲಾಗಿದೆ.

ಗುರುವಾರ ರಾತ್ರಿ ಇವರ ಮನೆಗೆ ಬಂದ ಆರೋಪಿ ತಂಗಿ ಇಲ್ಲದ್ದನ್ನು ನೋಡಿದ್ದು, ಸರೋಜಿನಿ ಜೊತೆ ಮಾತಿನ ಚಕಮಕಿ‌ ನಡೆಸಿದ್ದಾನೆ. ಸಿಟ್ಟಿಗೆದ್ದ ಆರೋಪಿ ಈಕೆಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ನಂತರ ತಂಗಿಯ ಮಗನನ್ನು ಚಾಕು ಹಿಡಿದು ಹೆದರಿಸಿ ತನ್ನ ಜೊತೆ ಕರೆದೊಯ್ದಿದ್ದಾನೆ ಎಂದು ಗೊತ್ತಾಗಿದೆ.
 
ಆರೋಪಿಯನ್ನು ಚವತ್ತಿ ಬಳಿಯಲ್ಲಿ ಪೊಲೀಸರು ಬಂಧಿಸಿದ್ದು, ಸರೋಜಿನಿಯ ತಂಗಿಯ ಮಗ‌ನನ್ನು ರಕ್ಷಿಸಿರುವ ಮಾಹಿತಿಯಿದೆ. ಸ್ಥಳಕ್ಕೆ ಕಾರವಾರದಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಯಲ್ಲಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು