ನಾಯಿ ದಾಳಿ: ಜಿಂಕೆ ಮರಿ ಸಾವು

ಕುಮಟಾ: ಸಮೀಪದ ಹೊನ್ನಾವರ ತಾಲ್ಲೂಕಿನ ಚಂದಾವರ ಅರಣ್ಯ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದ ಗಂಡು ಜಿಂಕೆ ಮರಿಯೊಂದು ನಾಯಿಗಳ ದಾಳಿಯಿಂದ ಗುರುವಾರ ಮೃತಪಟ್ಟಿದೆ.
‘ಚಂದಾವರ ಹನುಮಂತ ದೇವಸ್ಥಾನ ಎದುರಿನ ಕಾಡಿನಲ್ಲಿ ನಾಯಿಗಳ ಹಿಂಡು ದಾಳಿ ನಡೆಸಿತು. ಇದರಿಂದ ಬೆದರಿದ ಜಿಂಕೆ ಮರಿ ಹೃದಯಾಘಾತವಾಗಿ ಮೃತಪಟ್ಟಿರುವ ಸಾಧ್ಯತೆ ಇದೆ. ನಂತರ ಜಿಂಕೆ ಮರಿಯ ಅಂತ್ಯ ಸಂಸ್ಕಾರ ನಡೆಸಲಾಯಿತು. ಫಾರೆಸ್ಟರ್ ಎಸ್.ಐ.ನಾಯ್ಕ ಇದ್ದರು’ ಎಂದು ಕುಮಟಾ ಆರ್.ಎಫ್.ಒ ಪ್ರವೀಣ ನಾಯಕ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.