ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಜ್ಯೇಷ್ಠತೆ ನೀಡಲು ಒತ್ತಾಯ

Last Updated 29 ಆಗಸ್ಟ್ 2019, 14:39 IST
ಅಕ್ಷರ ಗಾತ್ರ

ಶಿರಸಿ: ಸೇವಾ ಜ್ಯೇಷ್ಠತೆ ನೀಡುವಂತೆ ಒತ್ತಾಯಿಸಿ ಕೆನರಾ ವೃತ್ತ ವ್ಯಾಪ್ತಿಯ ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ರಕ್ಷಕರು ಗುರುವಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ವಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಕೆನರಾ ವೃತ್ತದಲ್ಲಿ 413 ಉಪವಲಯ ಅರಣ್ಯಾಧಿಕಾರಿಗಳಿದ್ದಾರೆ. ಅದರಲ್ಲಿ ಶೇ 50:50ರ ಅನುಪಾತದಂತೆ, ಅರಣ್ಯ ರಕ್ಷಕರಾಗಿ ಬಡ್ತಿ ಹೊಂದಿದ 207 ಸಿಬ್ಬಂದಿಗೆ ಜ್ಯೇಷ್ಠತಾ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಕೂಡಲೇ ಈ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ‘ಈಗಾಗಲೇ ಹೊರಡಿಸಿರುವ ಕರಡಿನಲ್ಲಿ ನ್ಯೂನತೆಗಳಿವೆ. ಅದನ್ನು ವಾಪಸ್ ಪಡೆದು ತಜ್ಞರ ಜೊತೆ ಸಮಾಲೋಚಿಸಿ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು’ ಎಂದು ಪಾಟೀಲ ಭರವಸೆ ನೀಡಿದರು.

ಕೆನರಾ ವೃತ್ತ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಟಿ.ನಾಯ್ಕ, ಕಾರ್ಯದರ್ಶಿ ಎಂ.ಎಚ್.ನಾಯ್ಕ, ಐದು ಅರಣ್ಯ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 200 ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ರಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT