ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಅವಘಡ: ನಾಲ್ವರು ಕಾರ್ಮಿಕರು ಗಂಭೀರ

Last Updated 1 ಮಾರ್ಚ್ 2020, 13:18 IST
ಅಕ್ಷರ ಗಾತ್ರ

ಅಂಕೋಲಾ: ಇಲ್ಲಿನಅಗಸೂರ ಸಮೀಪದ ನವಗದ್ದೆಯಲ್ಲಿರುವ ಪ್ರಕೃತಿ ಪ್ರಾಡಕ್ಟ್ಸ್ ಆಯುರ್ವೇದಿಕ್ ಕಂಪನಿಯಲ್ಲಿ ಭಾನುವಾರ ಅಗ್ನಿ ಅವಘಡವಾಗಿದೆ. ನಾಲ್ವರುಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರ್ಮಿಕರು ‘ಸ್ಪ್ರೇಡ್ರೈಯರ್ ರೂಮ್‌’ನಲ್ಲಿದ್ದ ಕ್ಯಾನ್‌ಗಳಿಂದ ‘ಕಾಲಮೇಘ’ ಎಂಬ ದ್ರವ ಪದಾರ್ಥವನ್ನು ಅದನ್ನು ಸಂಗ್ರಹಿಸುವ ಟ್ಯಾಂಕ್‌ಗೆ ತುಂಬುತ್ತಿದ್ದರು. ಆಗ ಬೆಂಕಿ ಕಾಣಿಸಿಕೊಂಡುಬೊಬ್ರುವಾಡದ ರಾಘು ನಾಯ್ಕ (25), ಜಾರ್ಖಂಡ್‌ನಸಂತೋಷ ಪೂಜಾರ (19), ರಾಜೇಂದ್ರ ಮಿರ್ಜಾ (37), ಲಖನ್ ತೂರಿ (21) ಗಾಯಗೊಂಡರು.

ನಾಲ್ವರಿಗೂ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಶಾಸಕಿ ರೂಪಾಲಿ ನಾಯ್ಕಸ್ಥಳಕ್ಕೆ ಭೇಟಿ ನೀಡಿಪರಿಶೀಲಿಸಿದರು.ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ವಿಚಾರದಲ್ಲಿ ಸಂಸ್ಥೆಯ ಅಧಿಕಾರಿಗಳು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಗಾಯಗೊಂಡ ಕಾರ್ಮಿಕರ ಚಿಕಿತ್ಸಾ ವೆಚ್ಚವನ್ನು ಭರಿಸಿ, ಪರಿಹಾರ ನೀಡುವಂತೆಸಂಸ್ಥೆಯ ಆಡಳಿತಾಧಿಕಾರಿಗೆ ತಾಕೀತು ಮಾಡಿದರು.

ಇದೇವೇಳೆ, ಕಾರವಾರ ಹಾಗೂ ಅಂಕೋಲಾ ತಾಲ್ಲೂಕುಗಳಲ್ಲಿರುವ ಎಲ್ಲಾ ಕಾರ್ಖಾನೆಗಳು ಮತ್ತು ಗುಡಿ ಕೈಗಾರಿಕೆಗಳಲ್ಲಿರುವ ಕಾರ್ಮಿಕರ, ಅವರಿಗಿರುವ ಸೌಲಭ್ಯಗಳ ಬಗ್ಗೆ ಫೆ.2ರ ಒಳಗೆವರದಿ ನೀಡುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT