ಭಾನುವಾರ, ಸೆಪ್ಟೆಂಬರ್ 25, 2022
29 °C
ಮಳೆಯಲ್ಲೇ ಗಣಪತಿ ವಿಗ್ರಹಗಳ ಅದ್ಧೂರಿ ಮೆರವಣಿಗೆ: ಸಾವಿರಾರು ಮಂದಿ ಭಾಗಿ

ಕಾರವಾರ: ಭಕ್ತ ‘ಸಾಗರ’ದಲ್ಲಿ ಮುಳುಗಿದ ವಿನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗಣಪನ ವಿಗ್ರಹಗಳನ್ನು ಶನಿವಾರ ಅದ್ಧೂರಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಲಾಯಿತು. ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲೇ ಸಾವಿರಾರು ಜನ ಸೇರಿ ಮೆರವಣಿಗೆಯಲ್ಲಿ ಸಾಗಿದರು.

ಏಳು ಕಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪೂಜಿಸಿದ್ದ ಗಣಪತಿ ವಿಗ್ರಹಗಳನ್ನು ಶನಿವಾರ ಸಂಜೆ ವಿಸರ್ಜನೆ ಮಾಡಲಾಯಿತು. ಪಟಾಕಿ ಸಿಡಿಸಿ, ಜೈಕಾರ ಕೂಗುತ್ತ, ಧ್ವನಿವರ್ಧಕದ ಹಾಡಿಗೆ ಕುಣಿಯುತ್ತ ಸಂಭ್ರಮಿಸಿದರು. ವಿವಿಧ ವೇಷ ಭೂಷಣಧಾರಿಗಳ ನೃತ್ಯ, ಮೆರವಣಿಗೆಯಲ್ಲಿ ಯುವಕರು ರಚಿಸಿದ್ದ ಮಾನವ ಪಿರಮಿಡ್ ಆಕರ್ಷಿಸಿದವು.

ಹತ್ತು ದಿನಗಳ ಪೂಜೆಯ ಬಳಿಕ ವಿನಾಯಕನ ವಿಗ್ರಹಗಳನ್ನು ರವೀಂದ್ರನಾಥ ಟ್ಯಾಗೋರ್ ಕಡಲತೀರ, ಅಲಿಗದ್ದಾ ಕಡಲತೀರದಲ್ಲಿ, ಕಾಳಿ ರಿವರ್ ಗಾರ್ಡನ್ ಬಳಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಕೆ.ಇ.ಬಿ ರಸ್ತೆ, ಸವಿತಾ ಹೋಟೆಲ್ ವೃತ್ತ, ಗ್ರೀನ್ ಸ್ಟ್ರೀಟ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.