ಬುಧವಾರ, ನವೆಂಬರ್ 13, 2019
23 °C

ಗೋವಾ ಮದ್ಯ ವಶ: ಇಬ್ಬರ ಬಂಧನ

Published:
Updated:
Prajavani

ಗೋಕರ್ಣ: ಇಲ್ಲಿನ ಬಸ್ ನಿಲ್ದಾಣದ ಹಿಂಬದಿಯ ತಾರಮಕ್ಕಿಗೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಗೋವಾ ಮದ್ಯವನ್ನು ಪೊಲೀಸರು ಮಂಗಳವಾರ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಗಂಗೆಕೊಳ್ಳದ ಲಕ್ಷ್ಮಿ ಶೇಷು ತಾಂಡೇಲ್ (57) ಹಾಗೂ ಬೇಬಿ ಚಂದ್ರಕಾಂತ ತಾಂಡೇಲ್ (55) ಬಂಧಿತರು. ಅವರಿಂದ ಸುಮಾರು ₹ 4,300 ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ತಲಾ 750 ಎಂ.ಎಲ್ ಅಳತೆಯ 70 ಮದ್ಯದ ಬಾಟಲಿಗಳು ಅವರ ಬಳಿ ಸಿಕ್ಕಿವೆ. ಅವುಗಳನ್ನು ಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ತಮ್ಮ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಪಿ.ಎಸ್.ಐ. ಸುಧಾ ಅಘನಾಶಿನಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ ಪೊಲೀಸರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪ‍ಡಿಸಿದ್ದಾರೆ.

ಪ್ರತಿಕ್ರಿಯಿಸಿ (+)