ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಕೊರೊನಾದಿಂದ 85 ಜನ ಗುಣಮುಖ, 47 ಮಂದಿಗೆ ದೃಢ

ಸೋಂಕುಮುಕ್ತರಾದವರ ಸಂಖ್ಯೆ ಹಳಿಯಾಳ, ದಾಂಡೇಲಿ, ಶಿರಸಿಯಲ್ಲಿ ಅಧಿಕ
Last Updated 28 ಜುಲೈ 2020, 14:00 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ 47 ಜನರಿಗೆ ಕೋವಿಡ್ 19 ಮಂಗಳವಾರ ದೃಢಪಟ್ಟಿದ್ದರೆ, 85 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕುಗಳಲ್ಲಿ ಸೋಂಕಿತರು ಹಾಗೂ ಗುಣಮುಖರಾದವರ ಸಂಖ್ಯೆ ಇತರ ತಾಲ್ಲೂಕುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ.

ಈ ತಾಲ್ಲೂಕುಗಳಲ್ಲಿ 15 ಮಂದಿಗೆ ಕೋವಿಡ್ ದೃಢಪಟ್ಟಿದ್ದರೆ, ಭಾನುವಾರ 25 ಮಂದಿ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಮರಳಿದ್ದಾರೆ. ಶಿರಸಿ ತಾಲ್ಲೂಕಿನಲ್ಲಿ ಒಂಬತ್ತು ಮಂದಿ ಸೋಂಕಿತರಾಗಿದ್ದರೆ, 22 ಮಂದಿ ಗುಣಮುಖರಾಗಿದ್ದಾರೆ.

ಉಳಿದಂತೆ, ಕಾರವಾರದಲ್ಲಿ ಎಂಟು ಮಂದಿ, ಹೊನ್ನಾವರ ಹಾಗೂ ಯಲ್ಲಾಪುರದಲ್ಲಿ ತಲಾ ಐವರು, ಭಟ್ಕಳದಲ್ಲಿ ನಾಲ್ವರು ಹಾಗೂ ಸಿದ್ದಾಪುರದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಕಾರವಾರದಲ್ಲಿ ಏಳು, ಕುಮಟಾದಲ್ಲಿ 19, ಹೊನ್ನಾವರದಲ್ಲಿ ಮೂವರು, ಸಿದ್ದಾಪುರದಲ್ಲಿ ಏಳು ಹಾಗೂ ಜೊಯಿಡಾದಲ್ಲಿ ಇಬ್ಬರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 71 ಮಂದಿ ಮನೆಗಳಲ್ಲೇ ಐಸೋಲೇಷನ್‌ನಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಶಿರಸಿಯಲ್ಲಿ 25, ಭಟ್ಕಳದಲ್ಲಿ 19, ಕುಮಟಾದಲ್ಲಿ ಒಂಬತ್ತು, ಅಂಕೋಲಾದಲ್ಲಿ ಎಂಟು, ಕಾರವಾರದಲ್ಲಿ ಐವರು, ಹೊನ್ನಾವರದಲ್ಲಿ ಮೂವರು ಹಾಗೂ ಹಳಿಯಾಳದಲ್ಲಿ ಇಬ್ಬರಿದ್ದಾರೆ.

ಮಂಗಳವಾರದ ದೃಢಪಟ್ಟ ಸೋಂಕಿತರ ಪೈಕಿ 28 ಮಂದಿ ಕೋವಿಡ್ ಪೀಡಿತರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಆರು ಮಂದಿಗೆ ಸೋಂಕು ಬಂದಿರುವ ಮೂಲ ತಕ್ಷಣಕ್ಕೆ ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಒಂಬತ್ತು ಮಂದಿಗೆ ಜ್ವರದ (ಐ.ಎಲ್.ಐ) ಲಕ್ಷಣಗಳಿವೆ. ಒಬ್ಬರಿಗೆ ಉಸಿರಾಟದ ತೀವ್ರ ಸಮಸ್ಯೆ (ಎಸ್.ಎ.ಆರ್.ಐ) ಇರುವುದು ಕಂಡುಬಂದಿದೆ. ಮೂವರು ದೇಶದ ಒಳಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

ಇಬ್ಬರ ಸಾವು:ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಕೋವಿಡ್ ಪೀಡಿತರು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ಮಂಗಳವಾರ ಮೃತಪಟ್ಟರು.

ಹೊನ್ನಾವರದ 78 ವರ್ಷದ ಪುರುಷ ಜುಲೈ 25ರಿಂದ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕೋವಿಡ್ ನ್ಯುಮೋನಿಯಾವೂ ಇತ್ತು. ಅವರ ಮೃತದೇಹವನ್ನು ಜಿಲ್ಲಾಡಳಿತವು ಹೊನ್ನಾವರಕ್ಕೆ ಕಳುಹಿಸಿಕೊಟ್ಟಿದೆ.

ಜುಲೈ 26ರಂದು ದಾಖಲಾದ ಕಾರವಾರದ 65 ವರ್ಷದ ಮಹಿಳೆ ಮೃತಪಟ್ಟಿದ್ದು, ಜುಲೈ 27ರಂದು ಅವರನ್ನು ‘ಕ್ರಿಮ್ಸ್‌’ನ ಕೋವಿಡ್ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಅವರಿಗೂ ಕೋವಿಡ್ ನ್ಯುಮೋನಿಯಾ ಇತ್ತು ಎಂದು ಸಂಸ್ಥೆಯ ವರದಿ ತಿಳಿಸಿದೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

1,832 - ಒಟ್ಟು ಸೋಂಕಿತರು

633 - ಸಕ್ರಿಯ ಪ್ರಕರಣಗಳು

1,110 - ಗುಣಮುಖರಾದವರು

19 - ಮೃತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT