ಶನಿವಾರ, ಜುಲೈ 2, 2022
25 °C
ಶಿರಸಿಯಲ್ಲೊಂದು ಮಾದರಿ ತ್ರಿಸ್ಟಾರ್ ಹೋಟೆಲ್

ಅತಿಥಿ ಸತ್ಕಾರಕ್ಕೆ ‘ಸುಪ್ರಿಯಾ ಇಂಟರನ್ಯಾಷನಲ್’ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನಗರದ ಕಾಲೇಜು ರಸ್ತೆಯಲ್ಲಿ ಹೊಸದಾಗಿ ತಲೆ ಎತ್ತಿರುವ ಐದು ಮಹಡಿಯ ‘ಸುಪ್ರಿಯಾ ಇಂಟರನ್ಯಾಷನಲ್’ ತ್ರಿಸ್ಟಾರ್ ಹೋಟೆಲ್ ಅತಿಥಿ ಸತ್ಕಾರಕ್ಕೆ ಸಜ್ಜಾಗಿದೆ.

ಪ್ರವಾಸಿಗರನ್ನು ಹೆಚ್ಚು ಸೆಳೆಯುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಟಾರ್ ಹೋಟೆಲ್‌ಗಳ ಸಂಖ್ಯೆ ತೀರಾ ಕಡಿಮೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಸುಪ್ರಿಯಾ ಸೇವೆಗೆ ಸಿದ್ಧಗೊಂಡಿದೆ. 115 ಕೊಠಡಿಗಳು, 2 ಬ್ಯಾಂಕ್ವೆಟ್ ಹಾಲ್, 4 ಡಾರ್ಮೆಟ್ರಿ ಒಳಗೊಂಡಿರುವ ಹೋಟೆಲ್ ಅನ್ನು ನುರಿತ ಎಂಜಿನಿಯರ್‌ಗಳು, ಅನುಭವಿ ವಾಸ್ತುಶಿಲ್ಪಿಗಳು ಸೇರಿ ನಿರ್ಮಿಸಿದ್ದಾರೆ.

ಏಕಕಾಲಕ್ಕೆ 80 ವಾಹನಗಳನ್ನು ನಿಲುಗಡೆ ಮಾಡಬಹುದಾದ ವಿಶಾಲ ಪಾರ್ಕಿಂಗ್ ಸೌಲಭ್ಯ ಕಟ್ಟಡದ ನೆಲಮಹಡಿಯಲ್ಲಿದೆ. ಮನಸೆಳೆಯುವ ವಿನ್ಯಾಸದ ಒಳಾಂಗಣ, ಗುಣಮಟ್ಟದ ಫರ್ನೀಚರ್ ಬಳಕೆ ಮಾಡಲಾಗಿದೆ. ಸಸ್ಯಾಹಾರ, ಮಾಂಸಾಹಾರಕ್ಕೆ ಪ್ರತ್ಯೇಕ ರೆಸ್ಟೊರೆಂಟ್‍ಗಳನ್ನು ಒಳಗೊಂಡಿದೆ.

ಮೇ 26 ರಂದು ಬೆಳಿಗ್ಗೆ 11.30ಕ್ಕೆ ಹೋಟೆಲ್ ಉದ್ಘಾಟನೆಗೊಳ್ಳಲಿದ್ದು, ಚಿತ್ರನಟ ಶಿವರಾಜ್‌ಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

‘ಆತಿಥ್ಯ ಕ್ಷೇತ್ರದಲ್ಲಿ ಶಿರಸಿ ಹೊಸಮೈಲಿಗಲ್ಲು ಸ್ಥಾಪಿಸಬೇಕು ಎಂಬ ಉದ್ದೇಶದೊಂದಿಗೆ ಸುಪ್ರಿಯಾ ಇಂಟರನ್ಯಾಷನಲ್ ಸ್ಥಾಪನೆಯಾಗಿದೆ. ಹಲವು ಸ್ಟಾರ್ ಹೋಟೆಲ್‌ಗಳ ಸೇವೆ ಗಮನದಲ್ಲಿಟ್ಟು, ಅನುಭವಿ ಸಿಬ್ಬಂದಿಯೊಂದಿಗೆ ಈ ಹೋಟೆಲ್ ಮುನ್ನಡೆಯಲಿದೆ’ ಎನ್ನುತ್ತಾರೆ ಹೊಟೆಲ್ ಮಾಲೀಕ ಭೀಮಣ್ಣ ನಾಯ್ಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.