ಗುರುವಾರ , ಜನವರಿ 23, 2020
28 °C

ಮರಣದಲ್ಲೂ ಒಂದಾದ ಸತಿ–ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಗುಬ್ಬಿಮನೆಯ ಗಣಪತಿ ಹೆಗಡೆ (81) ಹಾಗೂ ಅವರ ಪತ್ನಿ ಭಾಗೀರಥಿ ಹೆಗಡೆ (74) ಸಾವಿನಲ್ಲೂ ಒಟ್ಟಿಗೆ ಪಯಣಿಸಿದ್ದಾರೆ. ಅವರಿಗೆ ಪುತ್ರ, ಪುತ್ರಿ ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ದಾಕ್ಷಾಯಿಣಿ ಹೆಗಡೆ ಇದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಣಪತಿ ಹೆಗಡೆ ಅವರು ಭಾನುವಾರ ಬೆಳಗಿನ ಜಾವ 1 ಗಂಟೆಗೆ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಮೃತದೇಹವನ್ನು ಸಂಜೆ 4.30ಕ್ಕೆ ಆಂಬುಲೆನ್ಸ್‌ನಲ್ಲಿ ಊರಿಗೆ ತರಲಾಯಿತು. ಪತಿ ಮೃತಪಟ್ಟ ವಿಷಯ ತಿಳಿದು ಆಘಾತಕ್ಕೊಳಗಾದ ಭಾಗೀರಥಿ ಹೆಗಡೆ ಸಂಜೆ 5.30ಕ್ಕೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟರು. ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಕ್ರಿಯೆ ನಡೆಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು