ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂಡೂಕ’ಗಳಿಗೂ ಕಳ್ಳರ ಕಾಟ! ಗೋವಾದಲ್ಲಿ ‘ಜಂಪಿಂಗ್ ಚಿಕನ್’ಗೆ ಭಾರಿ ಬೇಡಿಕೆ

Last Updated 22 ಜೂನ್ 2019, 20:00 IST
ಅಕ್ಷರ ಗಾತ್ರ

ಕಾರವಾರ:ಜಿಲ್ಲೆಯಲ್ಲಿಮಳೆ ಬೀಳುತ್ತಿದ್ದಂತೆ ಕಾಣಸಿಗುವ ಕಪ್ಪೆಗಳಿಗೂ ಇದೀಗ ಕಳ್ಳರ ಭಯ ಶುರುವಾಗಿದೆ.ಹಣಕ್ಕಾಗಿ ನೆರೆ ರಾಜ್ಯ ಗೋವಾಕ್ಕೆ ಕಪ್ಪೆಗಳನ್ನು ಸಾಗಿಸುವ ಜಾಲ ಜಿಲ್ಲೆಯಲ್ಲಿರುವುದು ವನ್ಯಜೀವಿ ಪ್ರೇಮಿಗಳಲ್ಲಿಕಳವಳ ಉಂಟುಮಾಡಿದೆ.

ಮಳೆಗಾಲದಲ್ಲಿ ವಿಶೇಷವಾಗಿನೆರೆಯ ಗೋವಾ ರಾಜ್ಯದಲ್ಲಿ‘ಜಂಪಿಂಗ್ ಚಿಕನ್’ ಖಾದ್ಯಕ್ಕೆ ಭಾರಿ ಬೇಡಿಕೆ ಇದೆ. ಅಲ್ಲಿನ ಪ್ರಸಿದ್ಧ ಹೋಟೆಲ್‌ಗಳಲ್ಲಿಈ ಖಾದ್ಯದ ದರವೂ ದುಬಾರಿ. ಇದು ಬೇರಾವ ಪ್ರಾಣಿ, ಪ‍ಕ್ಷಿ ಮಾಂಸವಲ್ಲ;

‘ಇಂಡಿಯನ್ ಬುಲ್ ಫ್ರಾಗ್‌’ ತಳಿಯ ಕಪ್ಪೆಯ ಮಾಂಸ!

‘ಕರ್ನಾಟಕದ ಗಡಿಭಾಗದಲ್ಲಿರುವ ಕಾರವಾರದಿಂದ ಭಟ್ಕಳದವರೆಗೆ ಕಪ್ಪೆಗಳನ್ನು ಹಿಡಿದು ಸಾಗಿಸುವ ವ್ಯವಸ್ಥಿತ ಜಾಲ ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಜಾಗೃತವಾಗುತ್ತದೆ. ಈಗಾಗಲೇ ಅಲ್ಪ ಪ್ರಮಾಣದಲ್ಲಿ ಇವುಗಳ ಬೇಟೆ ಶುರುವಾಗಿದೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ವೈಲ್ಡ್‌ಲೈಫ್‌ ವೆಲ್‌ಫೇರ್ ಸೊಸೈಟಿಯ ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ.

ಕಣ್ತಪ್ಪಿಸಿ ಸಾಗಾಟ

‘ಒಂದು ದಶಕದಿಂದಲೂ ಕಪ್ಪೆಗಳ ಕಳ್ಳ ಸಾಗಣೆ ನಡೆಯುತ್ತಿದೆ. ಅರಣ್ಯ ಇಲಾಖೆ, ಪರಿಸರ ಪ್ರಿಯರ ಸಹಕಾರದಿಂದ ಗೋವಾ ಸರ್ಕಾರ ಕಪ್ಪೆಗಳನ್ನು ಬೇಟೆಯಾಡುವುದಕ್ಕೆ ನಿರ್ಬಂಧ ಹೇರಿದೆ. ಹೀಗಾಗಿ, ಅವುಗಳ ಬೇಟೆ ಅಲ್ಲಿ ತಗ್ಗಿದೆ. ಆದರೆ, ಕರ್ನಾಟಕದಲ್ಲೂ ಈ ಬಗ್ಗೆ ನಿರ್ಬಂಧ ಇದ್ದರೂ ಸಹಕಟ್ಟೆಚ್ಚರದ ಮಧ್ಯೆಯೂ ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮವಾಗಿ ಇಲ್ಲಿಂದ ಕಪ್ಪೆಗಳನ್ನು ಗೋವಾಕ್ಕೆ ಸಾಗಿಸಲಾಗುತ್ತದೆ’ ಎಂದು ಅವರು ದೂರುತ್ತಾರೆ.

‘ಕೆಲವು ವರ್ಷಗಳ ಹಿಂದೆ ಇಂಥ ಸಾಗಾಣಿಕೆ ಜಾಲವನ್ನು ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಹಿಡಿದಿತ್ತು. ಅಂದು ಮಾಂಸಕ್ಕಾಗಿ ಕಪ್ಪೆಗಳನ್ನೂ ಬೇಟೆಯಾಡುತ್ತಾರೆ, ಅವುಗಳನ್ನು ಗೋವಾಕ್ಕೆ ಸಾಗಿಸಲಾಗುತ್ತದೆ ಎನ್ನುವ ಮಾಹಿತಿ ಗೊತ್ತಾಗಿತ್ತು’ ಎಂದು ಅವರು ತಿಳಿಸಿದರು.

ಕಪ್ಪೆಗಳು ನಿಸರ್ಗದತ್ತ ವೈದ್ಯ

ಮಾಂಸಕ್ಕಾಗಿ ಸಾಯಿಸುವುದರಿಂದಾಗಿ ಕಪ್ಪೆಗಳ ಸಂತತಿ ಕ್ಷೀಣಿಸುತ್ತದೆ. ಇದರಿಂದ ಪರಿಸರದ ಜೀವವೈವಿಧ್ಯತೆಗೆ ಧಕ್ಕೆ ಉಂಟಾಗುತ್ತದೆ ಎನ್ನುತ್ತಾರೆ ಸಂಶೋಧಕ ಮಂಜುನಾಥ ನಾಯಕ.

‘ಕಪ್ಪೆಗಳು ನಿಸರ್ಗದತ್ತವಾದ ವೈದ್ಯನಿದ್ದಂತೆ. ಸೊಳ್ಳೆಗಳು, ಅವುಗಳ ಲಾರ್ವಾ, ಮೊಟ್ಟೆ ಹಾಗೂ ಇನ್ನಿತರ ರೋಗ ಹರಡುವ ಕೀಟಗಳನ್ನುಭಕ್ಷಿಸುವುದರಿಂದ ಮಲೇರಿಯಾ, ಡೆಂಗಿ ಮುಂತಾದರೋಗಗಳ ಹರಡುವಿಕೆ ಕಡಿಮೆಯಾಗುತ್ತದೆ’ ಎಂದು ವಿವರಿಸಿದರು.

‘ಕಪ್ಪೆಗಳ ಬೇಟೆ, ಅದರ ಮಾಂಸ ಮಾರಾಟ ಅಪರಾಧ. ಅಂತಹವರಿಗೆ ₹25 ಸಾವಿರ ದಂಡ ಹಾಗೂ

ಮೂರು ವರ್ಷದವರೆಗೆ ಶಿಕ್ಷೆವಿಧಿಸಲು ಕಾನೂನಿನಲ್ಲಿಅವಕಾಶ ಇದೆ’ ಎಂದು ಹೇಳಿದರು.

* ಕಪ್ಪೆಗಳನ್ನು ಹಿಡಿದು ಸಾಗಿಸುವುದನ್ನು ತಡೆಯಲು ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಈ ಬಗ್ಗೆ ಜಾಗೃತರಾಗಿ ಇರಲು ತಿಳಿಸಿದ್ದೇನೆ.

ವಸಂತರೆಡ್ಡಿ,ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT