ಸೋಮವಾರ, ಫೆಬ್ರವರಿ 24, 2020
19 °C

ಕದಂಬೋತ್ಸವ ಮ್ಯಾರಥಾನ್: ಕಾರವಾರದ ಶಿವಾಜಿ ಪರಶುರಾಮ ಗೌಡ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶಿರಸಿ: ಕನ್ನಡದ ಪ್ರಥಮ ರಾಜಧಾನಿ, ತಾಲ್ಲೂಕಿನ ಬನವಾಸಿಯ ಕದಂಬೋತ್ಸವಕ್ಕೆ ಸಜ್ಜುಗೊಂಡಿದೆ. 
ಶನಿವಾರ ಸಂಜೆ 6.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕದಂಬೋತ್ಸವಕ್ಕೆ ಚಾಲನೆ ನೀಡಲಿದ್ದು, ಇದೇ ವೇದಿಕೆಯಲ್ಲಿ ಸಾಹಿತಿ ಡಾ.ಸಿದ್ಧಲಿಂಗಯ್ಯ ಅವರಿಗೆ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ.

ಕದಂಬೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಶನಿವಾರ ಬೆಳಿಗ್ಗೆ ಐದು ಕಿ.ಮೀ ಮ್ಯಾರಥಾನ್ ನಡೆಯಿತು. ಗುಡ್ನಾಪುರದ ರಾಣಿ ನಿವಾಸದಿಂದ ಬನವಾಸಿವರೆಗೆ ನಡೆದ ಮ್ಯಾರಥಾನ್‌ನಲ್ಲಿ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಪ್ರೊ ಕಬಡ್ಡಿ ಆಟಗಾರ ಹರೀಶ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಮ್ಯಾರಾಥಾನ್‌ನಲ್ಲಿ ವಿದ್ಯಾರ್ಥಿಗಳು, ವೈದ್ಯರು, ಅಧಿಕಾರಿಗಳು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು. ಎಸ್‌ಪಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇಸ್, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಇದ್ದರು.

ಮ್ಯಾರಥಾನ್‌ನಲ್ಲಿ ಕಾರವಾರದ ಶಿವಾಜಿ ಪರಶುರಾಮ ಗೌಡ ಪ್ರಥಮ, ರಿಪ್ಪನ್‌ಪೇಟೆಯ ಸಂಜಯ ಜಿ ದ್ವಿತೀಯ, ಕಾರವಾರದ ಸಮೃದ್ಧ ನಾಯ್ಕ ತೃತೀಯ ಸ್ಥಾನ, ಸಂದೀಪ ಪಟಗಾರ ಬನವಾಸಿ ಚತುರ್ಥ ಸ್ಥಾನ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು