ಭಾನುವಾರ, ಆಗಸ್ಟ್ 18, 2019
21 °C

ಕಾರವಾರ: ಹೆಬ್ಬಾವು ಸಾವು

Published:
Updated:
Prajavani

ಕಾರವಾರ: ನಗರದ ಹಬ್ಬುವಾಡ ರಾಘವೇಂದ್ರ ಮಠದ ಸಮೀಪದ ಮುಖ್ಯರಸ್ತೆಯಲ್ಲಿ ಹೆಬ್ಬಾವೊಂದರ ಕಳೇಬರ ಸೋಮವಾರ ಪತ್ತೆಯಾಗಿದೆ. 

ಮನೆಯೊಂದರ ಮುಂದೆ ಚರಂಡಿಯಿಂದ ಮೇಲೆ ಬಂದಿದ್ದ ಅದರ ತಲೆಯ ಭಾಗಕ್ಕೆ ಸಣ್ಣ ಗಾಯವಾಗಿತ್ತು. ಅದರ ಮೇಲೆ ಯಾವುದಾದರೂ ವಾಹನ ಹೋಗಿ ಏಟಾಗಿರುವ ಸಾಧ್ಯತೆಯಿದೆ. ಹಾವಿಗೆ ಅಂದಾಜು ಎರಡು ವರ್ಷ ಪ್ರಾಯವಿರಬಹುದು. ಅದನ್ನು ಪರಿಶೀಲಿಸಿದ ಬಳಿಕ ಮಣ್ಣಿನಲ್ಲಿ ಹೂಳಲಾಯಿತು ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ನಾಯ್ಕ ತಿಳಿಸಿದ್ದಾರೆ.

Post Comments (+)