ಗುರುವಾರ , ಜನವರಿ 21, 2021
30 °C

ಸಮಾಜ ಒಡೆಯುವುದು ಮುಖ್ಯಮಂತ್ರಿ ಕೆಲಸ: ಡಿ.ಕೆ. ಶಿವಕುಮಾರ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಸಮುದಾಯಕ್ಕೊಂದು, ಭಾಷೆಗೊಂದು ನಿಗಮ ಸ್ಥಾಪಿಸಿ ಸಮಾಜ ಒಡೆಯುವುದು ಮುಖ್ಯಮಂತ್ರಿ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಮುಖಂಡರ ಸಭೆ ನಡೆಸಲು ನಗರಕ್ಕೆ ಭೇಟಿ ನೀಡಿರುವ ಅವರು ಮಾಧ್ಯಮದವರ ಜತೆ ಮಾತನಾಡಿದರು. ಸಮಾಜದಲ್ಲಿ ಏಕತೆ ಕಾಯ್ದುಕೊಳ್ಳುವುದು ಕಾಂಗ್ರೆಸ್ ಅಜೆಂಡಾ. ನಾವು ಸಮಾಜ ಒಡೆಯುವ ಸಿದ್ಧಾಂತದ ವಿರುದ್ಧ. ಆದರೆ ಬಿಜೆಪಿಯವರಿಗೆ ಒಡೆದು ಆಳುವುದು ರೂಢಿ ಎಂದರು.

ನ. 30ರಂದು ಪಕ್ಷದ ಮುಖಂಡರ ಸಭೆ ನಡೆಯಲಿದೆ. ಆ ವೇಳೆ ಸರ್ಕಾರದ ನಡೆಯ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು