ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರಿಮ್ಸ್’ ವೈದ್ಯರ ಸಾಧನೆ: ಶಿಶು ಕೋವಿಡ್ ಮುಕ್ತ

ಅಪಸ್ಮಾರಕ್ಕೂ ಚಿಕಿತ್ಸೆ ಯಶಸ್ವಿ: ಎರಡು ವರ್ಷದ ಮಗು ಕೂಡ ಸೋಂಕಿನಿಂದ ಗುಣಮುಖ
Last Updated 28 ಮೇ 2020, 14:40 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ 19 ಚಿಕಿತ್ಸೆಯಿಂದ ಮತ್ತೆ ಮೂವರು ಗುಣಮುಖರಾಗಿದ್ದು, ಇಲ್ಲಿನ ‘ಕ್ರಿಮ್ಸ್’ನ ವಿಶೇಷ ವಾರ್ಡ್‌ನಿಂದ ಗುರುವಾರ ಬಿಡುಗಡೆಯಾದರು. ಐದು ತಿಂಗಳ ಹಸುಗೂಸು (ರೋಗಿ ಸಂಖ್ಯೆ 747), ಎರಡು ವರ್ಷದ ಮಗು (ರೋಗಿ ಸಂಖ್ಯೆ 1206) ಹಾಗೂ 76 ವರ್ಷದ ಹಿರಿಯ ಮಹಿಳೆ (ರೋಗಿ ಸಂಖ್ಯೆ 744) ಸೋಂಕು ಮುಕ್ತರಾಗಿದ್ದಾರೆ.

ಐದು ತಿಂಗಳ ಹೆಣ್ಣು ಮಗು ಅ‍ಪಸ್ಮಾರದಿಂದ ಬಳಲುತ್ತಿದ್ದ ಕಾರಣ ಕೋವಿಡ್‌ಗೆ ಚಿಕಿತ್ಸೆ ಸ್ವಲ್ಪ ಸವಾಲಾಗಿತ್ತು. ಆದರೆ, ಅದನ್ನು ‘ಕ್ರಿಮ್ಸ್‌’ನಮಕ್ಕಳ ತಜ್ಞರಾದ ಡಾ.ವಿಶ್ವನಾಥ, ಡಾ.ಸೋನಿಯಾ ಹಾಗೂ ಡಾ.ಪ್ರವೀಣ ಸಮರ್ಪಕವಾಗಿ ಎದುರಿಸಿ ಮಗುವಿಗೆ ಚಿಕಿತ್ಸೆ ನೀಡಿದರು. ಈಗ ಮಗು ಕೋವಿಡ್ ಮತ್ತು ಅಪಸ್ಮಾರ, ಎರಡರಿಂದಲೂ ಗುಣಮುಖವಾಗಿದೆ.

‘ಮಗುವಿಗೆ ಅಪಸ್ಮಾರಕ್ಕೆ ಚಿಕಿತ್ಸೆ ಕೊಡಿಸಲೆಂದು ಪಾಲಕರು ಮಂಗಳೂರಿನ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಮೂವರೂ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಇದಕ್ಕೂ ಮೊದಲು ಆ ಮನೆಯ 18 ವರ್ಷದ ಯುವತಿಗೆ ಸೋಂಕು ಖಚಿತವಾಗಿತ್ತು. ಸುಮಾರು 16 ದಿನಗಳ ಚಿಕಿತ್ಸೆಯ ಬಳಿಕ ಅವರೆಲ್ಲರೂ ಗುಣಮುಖವಾದರು.ಮೇ 23ರಂದು ವಾರ್ಡ್‌ನಿಂದ ಬಿಡುಗಡೆಯಾದ 20 ಮಂದಿಯಲ್ಲಿ ಇವರೂ ಸೇರಿದ್ದರು. ಆದರೆ, ಮಗು ಸೋಂಕುಮುಕ್ತವಾಗಿರದ ಕಾರಣ, ಅದರ ಆರೈಕೆಗಾಗಿ ತಾಯಿಅನುಮತಿ ಪಡೆದು ಆಸ್ಪತ್ರೆಯಲ್ಲಿ ಉಳಿದುಕೊಂಡರು’ ಎಂದು ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದರು.

‘ಅದೇ ರೀತಿ, ಭಟ್ಕಳದಿಂದಕ್ರಿಮ್ಸ್‌ಗೆ ದಾಖಲಾದಮೊದಲ ರೋಗಿ 18 ವರ್ಷದ ಯುವತಿಯೂ (ರೋಗಿ ಸಂಖ್ಯೆ 659) ಗುಣಮುಖರಾಗಿದ್ದರು. ಆದರೆ, ಅವರ ಅಜ್ಜಿಯನ್ನು (ರೋಗಿ ಸಂಖ್ಯೆ 744) ಉಪಚರಿಸಲು ಯಾರೂ ಇಲ್ಲ ಎಂಬ ಕಾರಣಕ್ಕೆ ತನಗೂ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವಂತೆಮನವಿ ಮಾಡಿದ್ದರು. ಈಗ ಎಲ್ಲರೂ ಕೋವಿಡ್ ಮುಕ್ತರಾಗಿದ್ದಾರೆ’ ಎಂದು ಸಂತಸವ್ಯಕ್ತಪಡಿಸಿದರು.

ಸೋಂಕು ಮುಕ್ತ:‘ಮಗುವಿನ ತಾಯಿ ಮತ್ತು ಯುವತಿಯನ್ನು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮೊದಲು ಮತ್ತೊಮ್ಮೆ ಅವರ ಗಂಟಲುದ್ರವದ ಪರೀಕ್ಷೆ ಮಾಡಲಾಗಿದೆ.ಕೋವಿಡ್ 19 ನೆಗೆಟಿವ್ ಬಂದಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ’ ಎಂದು ಡಾ.ಗಜಾನನ ನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT