ಮಂಗಳವಾರ, ಜುಲೈ 27, 2021
28 °C

ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯ ಉಪವಾಸ ನಿರಶನ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಯತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಉಪವಾಸ ನಿರಶನವನ್ನು ಸೋಮವಾರ ಅಂತಿಮಗೊಳಿಸಿದ್ದಾರೆ.

ನಿರಶನ ನಿಲ್ಲಿಸುವಂತೆ ಪೇಜಾವರ ಶ್ರೀ, ಸುತ್ತೂರು ಶ್ರೀಗಳು, ಮುಖ್ಯಮಂತ್ರಿಗಳು,ರಾಜ್ಯ ಸರಕಾರದ ವಿವಿಧ ಮಂತ್ರಿಗಳು,ಅಷ್ಠಮಠ ಹಾಗೂ ನಾಡಿನ ವಿವಿಧ ಯತಿಗಳು ಮನವಿ ಮಾಡಿಕೊಂಡ ಮೇರೆಗೆ ಶ್ರೀಗಳು ಈ ತೀರ್ಮಾನ ಕೈಗೊಂಡಿದ್ದಾರೆ.

ಮಠದ ವಿರುದ್ದ ಕೆಲವರು ಆಪಾದನೆಗಳನ್ನು ಹೊರಿಸೊದ್ದರಿಂದ ಮನನೊಂದ ಶ್ರೀಗಳು ಕಳೆ ಮೂರು ದಿನಗಳಿಂದ ಉಪವಾಸ ಕೈಗೊಂಡಿದ್ದರು.

ಸಮಸ್ಯೆ ತಿಳಿಗೊಳಿಸುವ ಕುರಿತು ಪೇಜಾವರ ಶ್ರೀ, ಮುಖ್ಯಮಂತ್ರಿ ಗಳು ಭರವಸೆ ನೀಡಿದ ಮೇರೆಗೆ ಶ್ರೀಗಳು 60ಗಂಟೆಗಳ ಉಪವಾಸದ ಬಳಿಕ ನಿರಶನ ನಿಲ್ಲಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು