ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿ ನಕಲು ಮಾಡಿ ಪತ್ರ ಸಿದ್ಧಪಡಿಸಿದ ದುಷ್ಕರ್ಮಿಗಳು: ಕ್ರಮಕ್ಕೆ ಒತ್ತಾಯ

Last Updated 19 ಜುಲೈ 2022, 15:51 IST
ಅಕ್ಷರ ಗಾತ್ರ

ಕಾರವಾರ: ‘ನಗರದ ರಸ್ತೆಗಳ ನಾಮಫಲಕಗಳಲ್ಲಿ ಕನ್ನಡದೊಂದಿಗೇ ಕೊಂಕಣಿಯಲ್ಲೂ (ಕನ್ನಡ ಲಿಪಿಯಲ್ಲಿ) ಬರೆಯುವುದು ಸೂಕ್ತವಾಗಿದೆ ಎಂದು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯಾವುದೇ ಪತ್ರ ಬರೆದಿಲ್ಲ. ನನ್ನ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಪತ್ರ ಸಿದ್ಧಪಡಿಸಿದ್ದು, ಸಹಿಯನ್ನು ನಕಲು ಮಾಡಿದ್ದಾರೆ’ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಯು.ಎಲ್.ಪ್ರಭು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಕೊಂಕಣಿ ನಾಮಫಲಕ (ದೇವನಾಗರಿ ಲಿಪಿಯಲ್ಲಿ) ಬೇಕೆಂದು ಕೊಂಕಣಿ ಭಾಷಿಕರು ಕಳೆದ ತಿಂಗಳು ಪ್ರತಿಭಟನೆ ನಡೆಸಿದ್ದರು. ಆ ವಿಚಾರದಲ್ಲಿ ಅವರ ಹೆಸರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಜೂನ್ 20ರಂದು ಪತ್ರವೊಂದು ಸಲ್ಲಿಕೆಯಾಗಿತ್ತು. ಅದರಲ್ಲಿ ಅವರು ಕೊಂಕಣಿಯಲ್ಲೂ ಹೆಸರುಗಳನ್ನು ಬರೆಯುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾಗಿ ಉಲ್ಲೇಖಿಸಲಾಗಿತ್ತು.

ಈ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಸ್ವೀಕೃತಿ ಪತ್ರ ತಲುಪಿದಾಗ ತಮ್ಮ ಹೆಸರು ದುರ್ಬಳಕೆಯಾಗಿರುವ ವಿಚಾರ ಯು.ಎಲ್.ಪ್ರಭು ಅವರಿಗೆ ಗೊತ್ತಾಗಿದೆ.

‘ಆ ಪತ್ರದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಈ ಹಿಂದಿನ ಇಬ್ಬರು ಸದಸ್ಯರ ಹೆಸರನ್ನೂ ಉಲ್ಲೇಖಿಸಲಾಗಿದೆ. ಅವರ ಬಗ್ಗೆ ಅಗೌರವದ ಭಾವನೆ ಬರುವಂತೆ ಉಲ್ಲೇಖಿಸಲಾಗಿದೆ. ಅಂಥ ಪತ್ರವನ್ನು ನಾನು ಬರೆದಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ತಮ್ಮ ಸ್ಪಷ್ಟನೆಯ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ್ದಾರೆ.

‘ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಿಡಿಗೇಡಿಗಳು ಇದೇ ರೀತಿ ಮತ್ತಷ್ಟು ಜನರಿಗೆ ತೊಂದರೆ ಕೊಡುವ ಸಾಧ್ಯತೆಯಿರುತ್ತದೆ’ ಎಂದು ಅವರುಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

‘ನಕಲಿ’ಗಳ ಹಾವಳಿ:ಜಿಲ್ಲೆಯಲ್ಲಿ ನಕಲಿ ಪತ್ರಗಳು, ಆದೇಶಗಳನ್ನು ಸೃಷ್ಟಿಸುವ ಜಾಲ ಸಕ್ರಿಯವಾಗಿರುವ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಕಳೆದ ವಾರ ಮಳೆ ಜೋರಾಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಮಳೆ ಕಡಿಮೆಯಾದ ಬಳಿಕ ಪುನಃ ತರಗತಿಗಳು ಆರಂಭವಾಗುವ ಬಗ್ಗೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ, ಅದನ್ನೂ ತಿದ್ದಿದ್ದ ಕಿಡಿಗೇಡಿಗಳು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಮಾರ್ಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದು ಸಾಕಷ್ಟು ಗೊಂದಲಗಳಿಗೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT