ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕರು ಜೊತೆಯಾದರೆ ಅಭಿವೃದ್ಧಿ ಸುಲಭ: ಶಾಸಕಿ ರೂಪಾಲಿ ನಾಯ್ಕ

Last Updated 21 ಮೇ 2020, 12:01 IST
ಅಕ್ಷರ ಗಾತ್ರ

ಕಾರವಾರ: ‘ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಕೇವಲ ಶಾಸಕಮೂಲಕವೇ ಆಗಬೇಕು ಎಂದೇನಿಲ್ಲ. ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈ ಜೋಡಿಸಿದರೆ ಇದು ಸಾಧ್ಯ’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ನಗರದ ನಗರಸಭೆ ಹಳೆ ಕಚೇರಿಯ ಹಿಂಭಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕನಸು ಕಾಣುವುದು ಸುಲಭ. ಅದನ್ನು ಈಡೇರಿಸುವುದಕ್ಕೆ ಎಲ್ಲರೂ ಶ್ರಮಿಸಬೇಕು. ಉದ್ಯಾನಗಳಲ್ಲಿ ಅಳವಡಿಸಲಾದ ಜಿಮ್ ಪರಿಕರಗಳನ್ನುನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಉದ್ಯಾನಗಳನ್ನು ಮನೆಯಂತೆ ಅಂದವಾಗಿ ಇಟ್ಟುಕೊಳ್ಳಲು ಸ್ಥಳೀಯರೂ ಮುಂದಾಗಬೇಕು’ ಎಂದು ಸಲಹೆ‌ ನೀಡಿದರು.

ನಗರಸಭೆಯ ಹಳೆಯಕಚೇರಿ ಹಿಂಭಾಗ ಅಂದಾಜು ₹ 39 ಲಕ್ಷ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಇದೇವೇಳೆ ಭೂಮಿ ಪೂಜೆ ನೆರವೇರಿಸಿದರು. ಅಂತೆಯೇ,ಈಜುಕೊಳದ ಹಿಂಭಾಗದ ಹೂ ಹಣ್ಣು ಮಾರುಕಟ್ಟೆ ನಿರ್ಮಾಣ, ನಗರಸಭೆ ಕಚೇರಿ ಆವರಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ, ಬಸ್ ಡಿಪೊದ ಎದುರಿನ ಉದ್ಯಾನದಲ್ಲಿ ತೆರೆದಜಿಮ್ ಹಾಗೂ ಗಾಂಧಿ ನಗರದಲ್ಲಿ ಸಮುದಾಯ ಭವನದ ಉದ್ಘಾಟನೆಯನ್ನು ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು, ಉಪ ವಿಭಾಗಾಧಿಕಾರಿ ಪ್ರಿಯಾಂಗಾ.ಎಂ, ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಪಿ.ನಾಯ್ಕ, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT