ಭಾನುವಾರ, ಸೆಪ್ಟೆಂಬರ್ 22, 2019
23 °C

ಅಮ್ಮನಿಂದ ಅಪ್ಪನ ಕೊಲೆ: ಮಗನಿಂದ ದೂರು

Published:
Updated:

ಹೊನ್ನಾವರ: ದಿನವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಅಪ್ಪನನ್ನು ಅಮ್ಮ ಕೊಲೆ ಮಾಡಿದ್ದಾಗಿ ಮಗನೇ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.

ತಾಲ್ಲೂಕಿನ ಕಾನಗೋಡ ಎಂಬಲ್ಲಿ ಗುರುವಾರ ರಾತ್ರಿ ಮಂಜು ಹನ್ಮಂತ ನಾಯ್ಕ (58) ಎಂಬುವವರ ಕೊಲೆಯಾಗಿತ್ತು.

‘ಹನ್ಮಂತ ನಾಯ್ಕ ದಿನವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಗುರುವಾರ ರಾತ್ರಿ ಹೆಂಡತಿ ಮೇಲೆ ಹಲ್ಲೆಗೆ ಮುಂದಾಗಿದ್ದ. ಹೆಂಡತಿ ಲಕ್ಷ್ಮಿಯನ್ನು ಮನೆಯಿಂದ ಹೊರ ಹಾಕುವುದಾಗಿ ಬೆದರಿಕೆ ಒಡ್ಡಿದ್ದ. ಇದರಿಂದ ಸಿಟ್ಟಾದ ಆಕೆ ದೊಣ್ಣೆಯಿಂದ (ಸೊಟ್ಟ) ಆತನ ತಲೆಗೆ ಹೊಡೆದಳು. ಗಂಭೀರವಾಗಿ ಗಾಯಗೊಂಡ ಹನ್ಮಂತ ಮೃತಪಟ್ಟರು’ ಎಂದು ದೂರಿನಲ್ಲಿ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಪಿಎಸ್ಐ ತೇಜಸ್ವಿ.ಟಿ.ಐ ಹಾಗೂ ಸಿಪಿಐ ಚೆಲುವರಾಜು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Post Comments (+)