ಭಾನುವಾರ, ಆಗಸ್ಟ್ 1, 2021
21 °C

ಕಾರವಾರ: ಶಾಲೆಯ ಮಣ್ಣಿನ ಗೋಡೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಾರವಾರ: ತಾಲ್ಲೂಕಿನಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ದೇವಳಮಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಭಾಗಶಃ ಕುಸಿದೆ. ಮಣ್ಣಿನಿಂದ ಮಾಡಲಾದ ಗೋಡೆ ಇದೀಗ ಮತ್ತಷ್ಟು ಅಪಾಯ ಎದುರಿಸುತ್ತಿದೆ.

1950ರಲ್ಲಿ ನಿರ್ಮಿಸಲಾದ ಈ ಶಾಲಾ ಕೊಠಡಿಯನ್ನು ದುರಸ್ತಿ ಮಾಡುವಂತೆ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಠರಾವು ಮಾಡಿ ಶಿಕ್ಷಣ ಇಲಾಖೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ದುರಸ್ತಿಯಾಗಲೀ ಹೊಸ ಗೋಡೆಯ ನಿರ್ಮಾಣವಾಗಲೀ ಆಗಿರಲಿಲ್ಲ. 

ಭಾಗಶಃ ಕುಸಿದಿರುವ ಕೊಠಡಿಯಲ್ಲಿ ಆಟದ ಸಾಮಗ್ರಿ, ಕಲಿಕಾ ಸಾಮಗ್ರಿ ಹಾಗೂ ಹಳೆಯ ವಿದ್ಯಾರ್ಥಿಗಳ ದಾಖಲಾತಿ ಪತ್ರಗಳಿವೆ.  ಮಳೆ ಮತ್ತಷ್ಟು ಬಂದು ಅಕಸ್ಮಾತ್ ಉಳಿದ ಗೋಡೆಗಳೂ ಬಿದ್ದರೆ ಅವು ಸಂಪೂರ್ಣ ಹಾಳಾಗುತ್ತವೆ. ಅಲ್ಲದೇ ಲಕ್ಷಾಂತರ ರೂಪಾಯಿ ನಷ್ಟವಾಗುವ ಸಾಧ್ಯತೆಯಿದೆ. ಹಳೆಯ ಕೊಠಡಿಗಳನ್ನು ಮಳೆಗಾಲಕ್ಕೂ ಮೊದಲೇ ದುರಸ್ತಿ ಮಾಡಲು ಶಿಕ್ಷಣ ಇಲಾಖೆಯು ಅವಕಾಶ ಕೊಟ್ಟಿದರೆ ಸಾಮಗ್ರಿಯನ್ನು ಬೇರೆ ಕಡೆ ಸ್ಥಳಾಂತರಿಸಲು ಆಗುತ್ತಿತ್ತು ಎಂದು ಸಮಿತಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು