ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ ಸಾಗರ ಅಭಿಯಾನದಲ್ಲಿ ಸ್ವಚ್ಛತಾ ಕಾರ್ಯ

Last Updated 6 ಏಪ್ರಿಲ್ 2022, 14:52 IST
ಅಕ್ಷರ ಗಾತ್ರ

ಕಾರವಾರ: ‘ಪುನೀತ ಸಾಗರ’ ಅಭಿಯಾನದ ಅಂಗವಾಗಿ ಎನ್.ಸಿ.ಸಿ ಕೆಡೆಟ್‌ಗಳು ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಈಚೆಗೆ ಸ್ವಚ್ಛತಾ ಕಾರ್ಯ ಹಮ್ಮಿಕೊಂಡರು.

ಸಮುದ್ರ ತೀರದಲ್ಲಿದ್ದ ಪ್ಲಾಸ್ಟಿಕ್, ಗಾಜಿನ ತ್ಯಾಜ್ಯಗಳನ್ನು ಹೆಕ್ಕಿ ತೆಗೆದು ಚೀಲಗಳಲ್ಲಿ ತುಂಬಿದರು. ಜೊತೆಗೇ ಕರಪತ್ರಗಳ ವಿತರಣೆ, ಪ್ರತಿಜ್ಞೆ, ಸಹಿ ಅಭಿಯಾನಗಳ ಮೂಲಕವೂ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಬೀದಿ ನಾಟಕಗಳು, ರ‍್ಯಾಲಿಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲು ಸಂಘಟನೆಯು ಉದ್ದೇಶಿಸಿದೆ.

29ನೇ ಬೆಟಾಲಿಯನ್‌ನ ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್‌.ಸಿ.ಸಿ ಕೆಡೆಟ್‌ಗಳು, ಸೇಂಟ್ ಮೈಕೆಲ್ ಪ್ರೌಢಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಸಮೀರ್ ಪವಾರ್, ಲೆಫ್ಟಿನೆಂಟ್ ಕರ್ನಲ್ ಕೆ.ನಾಯರ್, ಆಡಳಿತಾಧಿಕಾರಿ ಸುಭಾಷ್ ಗೋರೆ, ಪ್ರಾಂಶುಪಾಲೆ ಪ್ರೊ.ವಿಜಯಾ ನಾಯ್ಕ, ಎನ್‌.ಸಿ.ಸಿ ಅಧಿಕಾರಿ ಪ್ರಾಧ್ಯಾಪಕಿ ಡಾ.ಅಂಜಲಿ ರಾಣೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT