ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಸುತ್ತಿ ಕೋಶ ಬರೆಯುವ ಆಂದ್ರೆಜ್!

ನಿವೃತ್ತ ಪ್ರಾಧ್ಯಾಪಕನಿಂದ ಏಷ್ಯಾ ಖಂಡದ ಪರ್ಯಟನೆ
Last Updated 7 ನವೆಂಬರ್ 2018, 14:03 IST
ಅಕ್ಷರ ಗಾತ್ರ

ಕಾರವಾರ: ದೇಶ ಸುತ್ತಿ ಕೋಶ ಬರೆಯಲೆಂದು ನಿವೃತ್ತ ಪ್ರಾಧ್ಯಾಪಕರೊಬ್ಬರು ಪೋಲೆಂಡ್‌ನಿಂದ ಕಾರಿನಲ್ಲೇ ಏಷ್ಯಾ ಖಂಡದ ಪರ್ಯಟನೆ ಕೈಗೊಂಡಿದ್ದಾರೆ. ಭಾರತದಲ್ಲೂ ಪ್ರಯಾಣಿಸುತ್ತಿರುವ ಅವರು,ಈಚೆಗೆನಗರದ ಮೂಲಕಗೋವಾ ರಾಜ್ಯಕ್ಕೆ ತೆರಳಿದರು.

72ರ ಹರೆಯದ ಆಂದ್ರೆಜ್ ಸೊಚಾಕ್ಕಿ, ‘ಪೋಲೆಂಡ್‌ ಟು ಏಷ್ಯಾ’ ಪ್ರವಾಸ ಕೈಗೊಂಡಿದ್ದಾರೆ. ಈ ರೀತಿಯ ಪ್ರವಾಸದ ಹವ್ಯಾಸವನ್ನು ತಮ್ಮ 30ನೇ ವಯಸ್ಸಿಗೆ ಆರಂಭಿಸಿದ ಅವರು, ಈವರೆಗೆ ಐದು ಖಂಡಗಳ 165 ದೇಶಗಳನ್ನು ಸುತ್ತಾಡಿದ್ದಾರಂತೆ. 25 ಸಾವಿರ ಕಿ.ಮೀ.ಗೂ ಅಧಿಕ ದೂರವನ್ನು ಅವರು ಕಾರಿನಲ್ಲೇ ಕ್ರಮಿಸಿದ್ದಾರೆ.

ತಾವು ಭೇಟಿ ನೀಡಿದ ದೇಶಗಳ ಸಂಸ್ಕೃತಿ, ಆಚಾರ– ವಿಚಾರ, ವಿಶೇಷತೆಗಳ ಬಗ್ಗೆ ಅವರು ಪುಸ್ತಕ ಬರೆಯುತ್ತಿದ್ದಾರೆ. ಭೇಟಿ ನೀಡುವ ದೇಶದಲ್ಲಿನ ಜನರೊಂದಿಗೆ ಬೆರೆತು ಅವರೊಡನೆ ಮಾತುಕತೆ ನಡೆಸುತ್ತ, ಸ್ಥಳೀಯ ಕಲೆ, ಸಂಪ್ರದಾಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ರಾತ್ರಿಯ ವೇಳೆ ಕಾರಿನಲ್ಲೇ ಕುಳಿತು ಪುಸ್ತಕ ಬರೆಯುತ್ತಾರೆ.

‘ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಸಮಯ ಸಿಕ್ಕಾಗ ಪರ್ಯಟನೆ ಕೈಗೊಳ್ಳುತ್ತಿದ್ದೆ. ಆದರೆ, ನಿವೃತ್ತಿ ಹೊಂದಿದ ಬಳಿಕ ಅದು ನಿರಂತರವಾಗಿದೆ. ಈ ಹಿಂದೆ ಬೈಕ್‌ ಬಳಸಿ ಪರ್ಯಟನೆ ನಡೆಸಿದ್ದೆ. ಆದರೆ, ಸರಂಜಾಮು ಹೊತ್ತೊಯ್ಯಲು ಸಹಕಾರಿ ಎಂದು ಈಗ ಕಾರನ್ನೇ ಬಳಸುತ್ತಿದ್ದೇನೆ’ ಎನ್ನುತ್ತಾರೆ ಆಂದ್ರೆಜ್.

‘ಸಂಚಾರಿ ಮನೆ’ಯಂತೆ ಕಾರು: 

ತಮ್ಮ ಸ್ವಂತ ಕಾರನ್ನೇ ಈ ಪರ್ಯಟನೆಗೆ ಬಳಸುತ್ತಿದ್ದಾರೆ. ಇದಕ್ಕಾಗಿ ಅವರು ಆಯಾ ರಾಷ್ಟ್ರದ ಅನುಮತಿ ಪಡೆದು, ಸಂಚಾರ ಮುಂದುವರಿಸುತ್ತಿದ್ದಾರೆ. ಊಟ, ತಿಂಡಿ, ನಿದ್ರೆಯನ್ನೂ ಅವರು ಕಾರಲ್ಲೇ ಮಾಡುತ್ತಿದ್ದಾರೆ. ಒಟ್ಟಾರೆ, ಕಾರನ್ನು ‘ಸಂಚಾರಿ ಮನೆ’ಯಂತೆ ಅವರು ಬಳಕೆ ಮಾಡುತ್ತಿದ್ದಾರೆ. ತಾವು ಸಂಚರಿಸುವ ರಾಷ್ಟ್ರಗಳಿಗೆ ಸಂಬಂಧಿಸಿದ ಪೋಸ್ಟರ್‌ಗಳು, ಸ್ಟಿಕ್ಕರ್‌ಗಳನ್ನು ಅವರು ತಮ್ಮ ಕಾರಿನತುಂಬಹಚ್ಚುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT