ಸೋಮವಾರ, ಜೂಲೈ 13, 2020
24 °C

ಕಾರವಾರ: ಭಾನುವಾರ ಮುದ ನೀಡಿದ ಮುಂಜಾನೆ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಾರವಾರ: ನಗರವೂ ಸೇರಿದಂತೆ ಕರಾವಳಿಯ ವಿವಿಧೆಡೆ ಭಾನುವಾರ ಬೆಳಿಗ್ಗೆಯೇ ಬಂದ ಸಾಧಾರಣ ಮಳೆ ಮುದ ನೀಡಿತು. ಬೆಳಿಗ್ಗೆ 6.15ಕ್ಕೆ ಆರಂಭವಾದ ಮಳೆ ಸುಮಾರು ಮುಕ್ಕಾಲು ಗಂಟೆ ಬಂತು.

ದಟ್ಟವಾದ ಮೋಡ, ಗುಡುಗು ಹಾಗೂ ಸಿಡಿಲಿನ ಅಬ್ಬರದೊಂದಿಗೆ ಬಂದ ಮಳೆ, ಭಾನುವಾರದ ಸಂಭ್ರಮವನ್ನು ತುಸು ಹೆಚ್ಚಿಸಿತು. ಮೂರು ದಿನಗಳಿಂದ ಗಾಳಿಯಲ್ಲಿ ಅಧಿಕ ತೇವಾಂಶ ಕಂಡುಬಂದ ಕಾರಣ ವಿಪರೀತ ಸೆಕೆಯ ಅನುಭವ ಆಗುತ್ತಿತ್ತು. ಕಾರವಾರ, ಅಂಕೋಲಾ, ಕುಮಟಾ ಸುತ್ತಮುತ್ತ ಆಗಾಗ ಕಾರ್ಮೋಡ ಕವಿದಿದ್ದರೂ ಮಳೆಯಾಗಿರಲಿಲ್ಲ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಅಲೆಗಳ ಅಬ್ಬರ ಹೆಚ್ಚಿರಲಿದೆ. ಹಾಗಾಗಿ ಜೂನ್ 4ರವರೆಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರಿಕಾ ಇಲಾಖೆಯು ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು