ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಪ್ರಜಾಪ್ರಭುತ್ವದ ಕಗ್ಗೊಲೆ

ಕಾಂಗ್ರೆಸ್ ಮುಖಂಡ ರಮೇಶಕುಮಾರ್ ಅಭಿಮತ
Last Updated 23 ನವೆಂಬರ್ 2019, 13:27 IST
ಅಕ್ಷರ ಗಾತ್ರ

ಯಲ್ಲಾಪುರ: ಮತದಾರರ ಭಾವನೆಗಳಿಗೆ ಧಕ್ಕೆ ಮಾಡಿ, ಯಾರ ಅಭಿಪ್ರಾಯಕ್ಕೂ ಮನ್ನಣೆ ನೀಡದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣಕ್ಕೆ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರೆ ತಪ್ಪಾಗಲಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಮೇಶ್‍ಕುಮಾರ್ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕಾಗಿ ವಿಶೇಷ ವಿಮಾನದಲ್ಲಿ ಮುಂಬೈ ಹಾರಿದ ಭೂಪರನ್ನು ಅನರ್ಹರನ್ನಾಗಿ ಮಾಡಿದ್ದು ಸಂವಿಧಾನವೇ. ನಾನು ಕೇವಲ ನನ್ನ ಪಾತ್ರ ನಿರ್ವಹಿಸಿದ್ದೇನೆ ಅಷ್ಟೆ. ಸುಪ್ರೀಂ ಕೋರ್ಟ್, ಈ ಉಪಚುನಾವಣೆಯಲ್ಲಿ ಅನರ್ಹರು ಸ್ಪರ್ಧಿಸಬಹುದು ಎಂದಿದೆಯೇ ಹೊರತು ಅನರ್ಹತೆಯನ್ನು ತೆಗೆದುಹಾಕಿದೆ ಎಂದು ಎಲ್ಲೂ ಹೇಳಿಲ್ಲ. ಹಾಗಾಗಿ ಅವರೆಲ್ಲ ಅನರ್ಹರೇ’ ಎಂದು ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕ ಸ್ಥಾನಕ್ಕೆ ಏಕಾಏಕಿ ರಾಜೀನಾಮೆ ನೀಡಿದವರನ್ನು ಈ ಕ್ಷೇತ್ರದವನಲ್ಲದ ನಾನೇ ಅನರ್ಹನೆಂದ ಮೇಲೆ, ಇದೇ ಕ್ಷೇತ್ರದ ಪ್ರಬುದ್ಧ ಮತದಾರರ ಅವರನ್ನು ಹೇಗೆ ಗೆಲ್ಲಿಸುತ್ತಾನೆ? ಜನರ ನಂಬಿಕೆಗೆ ದ್ರೋಹವೆಸಗಿದ ಇಂತಹ ಶಾಸಕರನ್ನು ಕ್ಷೇತ್ರದ ಮತದಾರ ತಿರಸ್ಕರಿಸುವುದು ಖಂಡಿತ. ಪಕ್ಷವೆಂದರೆ ಮಾತೆಯಿದ್ದಂತೆ. ಮಾತೃದ್ರೋಹ ಮಾಡಿದ ಅನರ್ಹ ಶಾಸಕ ಶಿವರಾಮ ಹೆಬ್ಬಾರರ ಸೋಲು ಖಚಿತ’ ಎಂದು ಹೇಳಿದರು.

ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಜೀರ್‌ ಅಹ್ಮದ್, ಕಾಂಗ್ರೆಸ್‍ ಅಭ್ಯರ್ಥಿ ಭೀಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್‍. ಗಾಂವ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗ್ವತ, ಪಟ್ಟಣ ಪಂಚಾಯ್ತಿ ಸದಸ್ಯ ಆಲಿ, ಸುನಂದಾ ನಾಯ್ಕ, ಕೈಸರ್, ಜಿಲ್ಲಾ ಪ್ರಚಾರ ಸಮಿತಿಯ ಸಂಚಾಲಕ ವೇಣುಗೋಪಾಲ ಮದ್ಗುಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT