ಜೊಯಿಡಾ:‘ತಾಲ್ಲೂಕಿನ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕದ ನದಿಗಳಿಗೆ ಹರಿಸುವ ಪ್ರಸ್ತಾವಕ್ಕೆ ನಮ್ಮ ವಿರೋಧವಿದೆ. ನಮ್ಮ ಕುಡಿಯುವ ನೀರಿನ ಯೋಜನೆಗೆ, ಕೃಷಿಗೆ ನೀರುಣಿಸುವ ಯೋಜನೆಗೆ ಅವಕಾಶ ನೀಡಬೇಕು. ಅದುಬಿಟ್ಟು ಬೇರೆ ಜಿಲ್ಲೆಗಳಿಗೆ ಸಾಗಿಸುವ ಪ್ರಯತ್ನದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಹೆಗಡೆಎಚ್ಚರಿಕೆ ನೀಡಿದ್ದಾರೆ.
‘ತಾಲ್ಲೂಕಿನ ಕುಡಿಯುವ ನೀರಿನ ಕಾಳಿ ಯೋಜನೆಯ ಪ್ರಸ್ತಾವಕ್ಕೆ ಸರ್ಕಾರದಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಜ್ವಲಂತ ಸಮಸ್ಯೆ ಇನ್ನೂ ಪರಿಹಾರ ಕಂಡಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕಾಳಿ ನೀರನ್ನು ಬೇರೆಡೆ ಹರಿಸಿಕೃಷಿಗಾಗಿ ಬಳಸುವ ಪ್ರಸ್ತಾವವನ್ನುವಿರೋಧಿಸುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಕಾಳಿ ನದಿಯ ಉಗಮದ ನಾಡು ಜೊಯಿಡಾ ತಾಲ್ಲೂಕಿನಲ್ಲಿ ಪ್ರತಿವರ್ಷ ಕುಡಿಯುವ ನೀರಿನ ಹಾಹಾಕಾರ ಕೇಳಿಬರುತ್ತಿದೆ. ಜನಪ್ರತಿನಿಧಿಗಳುನದಿಯನೀರನ್ನು ತಾಲ್ಲೂಕಿನ ಜನರು ಕುಡಿಯುವ ಉದ್ದೇಶಕ್ಕೆ ಬಳಸುವಲ್ಲಿ ವಿಫಲರಾಗಿದ್ದಾರೆ. ಇದು ಖೇದಕರ’ ಎಂದು ಹೇಳಿದ್ದಾರೆ.
ಕೃಷಿಕರ ಗುಳೆ ತಡೆಯಿರಿ:‘ಇಲ್ಲಿನ ಕೃಷಿಕರು ನೀರಿನ ಕೊರತೆಯಿಂದ ಕೃಷಿ ಮಾಡಲಾಗದೇ ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆಕೂಲಿಗಾಗಿ ಗುಳೆ ಹೋಗುವುದನ್ನು ಮೊದಲು ತಡೆಯಬೇಕಿದೆ. ತಾಲ್ಲೂಕಿನ ಕೃಷಿಗೆ ಸಕಾಲಕ್ಕೆ ನೀರು ಸಿಗದೆ ಬೆಳೆ ತೆಗೆಯಲಾಗದೆ ಭೂಮಿ ಬಂಜರು ಬಿದ್ದಿದೆ. ಇದನ್ನು ತಡೆಯಲು ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.