ಸೋಮವಾರ, ಸೆಪ್ಟೆಂಬರ್ 16, 2019
22 °C

ಪ್ರವಾಸಿಗರಿಗೆ ದುರಸ್ತಿಯಾಗದ ಆಸನಗಳ ಸ್ವಾಗತ!

Published:
Updated:
Prajavani

ಅಂಕೋಲಾ: ತಾಲ್ಲೂನ ಹೊನ್ನೆಗುಡಿ, ನದಿಭಾಗ ಸಮುದ್ರ ತೀರಗಳಿಗೆ ಬರುವ ಪ್ರವಾಸಿಗರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಲವು ವರ್ಷಗಳಿಂದ ಈ ಸಮುದ್ರ ತೀರದಲ್ಲಿ ಬಹುಬಾಷಾ ಚಲನಚಿತ್ರ, ಕಿರುತೆರೆ ಧಾರಾವಾಹಿಗಳು ಚಿತ್ರೀಕರಣವಾಗಿವೆ. ಹೀಗಾಗಿ ಪ್ರತಿನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ.

ಜನರಿಗೆ ಮುಖ್ಯವಾಗಿ ಬೇಕಾಗುವ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಮುಖ್ಯ ಸಮಸ್ಯೆಯಾಗಿದೆ. ಅಲ್ಲದೇ ಇಲ್ಲಿ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಆಸನಗಳೂ ಅಸ್ತವ್ಯಸ್ತವಾಗಿವೆ. ಹಾರವಾಡ, ಬೇಲೆಕೇರಿ, ಕೇಣಿ, ಶೇಡಿಕುಳಿ, ಹನಿಬೀಚ್ ಹೀಗೆ ಅನೇಕ ಕಡೆಗಳ ಪರಿಸ್ಥಿತಿಯೂ ಇದೇ ಆಗಿದೆ.

ನದಿಭಾಗ ಸಮುದ್ರ ತೀರದಲ್ಲಿ  ಒಬ್ಬ ಲೈಫ್ಗಾರ್ಡ್ ಇದ್ದಾರೆ. ಪ್ರವಾಸಿಗರಿಗೆ ಸರಿಯಾದ ಮಾರ್ಗಸೂಚಿ ಮತ್ತು ತೀರದಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿಲ್ಲ.

Post Comments (+)