ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಆಸ್ಪತ್ರೆ ಮೇಲ್ದರ್ಜೆಗೆ: ಸಂಪುಟ ಒಪ್ಪಿಗೆ

₹174.63 ಕೋಟಿ ವೆಚ್ಚ: 200 ಹಾಸಿಗೆ ಸಾಮರ್ಥ್ಯ: ಟ್ರಾಮಾ ಸೆಂಟರ್
Last Updated 23 ಅಕ್ಟೋಬರ್ 2020, 3:18 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಪಂಡಿತ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು₹174.63 ಕೋಟಿ ವೆಚ್ಚದಲ್ಲಿ 200 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ.

‘ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ₹112 ಕೋಟಿ, ಯಂತ್ರೋಪಕರಣಗಳು, ಇನ್ನಿತರ ಸಲಕರಣೆಗಳ ಅಳವಡಿಕೆಗೆ ₹30 ಕೋಟಿ, ಹೆಚ್ಚುವರಿ ಮಾನವ ಸಂಪನ್ಮೂಲಕ್ಕೆ ₹5.84 ಕೋಟಿ, ಔಷಧ ಮತ್ತು ಇತರೆ ವೆಚ್ಚಕ್ಕೆ ₹50 ಲಕ್ಷ, ಹೆಚ್ಚುವರಿ ವಾಹನ ಮತ್ತು ಜನರೇಟರ್ ವ್ಯವಸ್ಥೆಗೆ ₹21 ಲಕ್ಷ, ಹೆಚ್ಚುವರಿ ಯಂತ್ರಗಳು ಮತ್ತು ಉಪಕರಣಗಳಿಗೆ ₹26.08 ಕೋಟಿ ಅಗತ್ಯವಿದೆ. ಈ ಮೊತ್ತಗಳ ಮಂಜೂರಾತಿಗೆ ಆಡಳಿತಾತ್ಮಕ ಅನುಮೋದನೆಗೆ ಒಪ್ಪಿಗೆ ಸಿಕ್ಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

‘ಈ ಬಾರಿಯ ಬಜೆಟ್‍ನಲ್ಲಿ ಘೋಷಿಸಿ ದಂತೆ ಆಸ್ಪತ್ರೆ ಮೇಲ್ದೆರ್ಜೆಗೇರಿಸಲು ಒಪ್ಪಿಗೆ ನೀಡುವ ಮೂಲಕ ತಮ್ಮ ಮನವಿಯನ್ನು ಮುಖ್ಯಮಂತ್ರಿ ಮತ್ತು ಆರೋಗ್ಯ ಇಲಾಖೆ ಸಚಿವರು ಪುರಸ್ಕರಿಸಿದ್ದನ್ನು ಸ್ವಾಗತಿಸುತ್ತೇನೆ’ ಎಂದು ವಿಧನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.

‘ಶಿರಸಿಯ ವೈದ್ಯಕೀಯ ಇತಿಹಾಸ ದಲ್ಲಿ ಸರ್ಕಾರದ ಈ ನಿರ್ಧಾರ ಮಹತ್ವದ್ದು ಮತ್ತು ಅಭೂತಪೂರ್ವವಾಗಿದೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಇದೊಂದು ಹೊಸ ಮೈಲಿಗಲ್ಲು’ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

‘100 ಹಾಸಿಗೆ ಸಾಮರ್ಥ್ಯವಿದ್ದ ಆಸ್ಪತ್ರೆಯ ಪಕ್ಕ 60 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. ಹೆಚ್ಚುವರಿ 200 ಹಾಸಿಗೆ ಸೌಲಭ್ಯಕ್ಕೆ ಒಪ್ಪಿಗೆ ದೊರೆತಿ ದ್ದರಿಂದ ಟ್ರಾಮಾ ಸೆಂಟರ್, ಇನ್ನಿತರ ಸೌಕರ್ಯಗಳು ಆಸ್ಪತ್ರೆಗೆ ಲಭಿಸಲಿವೆ. ಇದರಿಂದ ವೈದ್ಯಕೀಯ ಕಾಲೇಜ್ ಸ್ಥಾಪನೆಯ ನಿಟ್ಟಿನಲ್ಲಿ ಅಗತ್ಯ ಅರ್ಹತೆಯೊಂದು ಸಿಗುವ ವಿಶ್ವಾಸ ಮೂಡಿದೆ’ ಎಂದು ಹಿರಿಯ ವೈದ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT