ಬುಧವಾರ, ಸೆಪ್ಟೆಂಬರ್ 22, 2021
28 °C

ಶಿರಸಿ: ನೆರೆ ಸಂತ್ರಸ್ತರಿಗೆ ಸುಷ್ಮಾ ಸಹಾಯಹಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನೆರೆ ಬಾಧಿತವಾಗಿದ್ದ ಸಿದ್ದಾಪುರ ತಾಲ್ಲೂಕಿನ ಅಣಲೇಬೈಲ್ ಗ್ರಾಮ ಪಂಚಾಯ್ತಿಯ ಹೊಸಪೇಟೆ ಬೈಲ್‍ನ ಜನರಿಗೆ ಕೆಪಿಸಿಸಿ ಶಿರಸಿ–ಸಿದ್ದಾಪುರ ಕ್ಷೇತ್ರದ ಉಸ್ತುವಾರಿ ಸುಷ್ಮಾ ರಾಜಗೋಪಾಲ್ ಅಗತ್ಯ ಸಾಮಗ್ರಿ ಒದಗಿಸಿ ನೆರವಾದರು.

ಈ ಭಾಗದಲ್ಲಿ ಹೆಚ್ಚಾಗಿ ಪರಿಶಿಷ್ಟ ಸಮುದಾಯದವರಿದ್ದು ನೆರೆಯಿಂದ ಮನೆ ಮುಳುಗಿದ್ದ ಪರಿಣಾಮ ಸಮೀಪದ ಕಾಳಜಿ ಕೇಂದ್ರದಲ್ಲಿ ವಾಸವಿದ್ದರು. ಅಲ್ಲಿಗೆ ಭೇಟಿ ನೀಡಿದ ಸುಷ್ಮಾ ರಾಜಗೋಪಾಲ ಸಂತ್ರಸ್ತರನ್ನು ಸಂತೈಸಿದರು. ಅವರಿಗೆ ಅಗತ್ಯವಿದ್ದ ಬ್ಲಾಂಕೆಟ್, ಚಾಪೆಗಳನ್ನು ನೀಡಿದರು.

ತಾಲ್ಲೂಕಿನ ರೇವಣಕಟ್ಟಾದ ನೆರೆಬಾಧಿತ ಪ್ರದೇಶಕ್ಕೂ ತೆರಳಿ ಅಲ್ಲಿನ ಸಂತ್ರಸ್ತರಿಗೆ ಅಕ್ಕಿ, ಹಾಸಿಗೆ ಹೊದಿಕೆ, ಚಾಪೆ ವಿತರಿಸಿದರು.

ಸೂರ್ಯಪ್ರಕಾಶ ಹೊನ್ನಾವರ, ಸತೀಶ್ ನಾಯ್ಕ, ರಾಜು ಉಗ್ರಾಣಕರ್, ಸೂರಜ್ ನಾಯ್ಕ್, ಜಾನ್ಮನೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ನೇಹಾ ಬಾನು, ಅರುಣ ಬಣಗಾರ, ಅಬ್ದುಲ್ ಸಾಬ್ ಹೇರೂರು, ಭಾಸ್ಕರ ಹೆಗಡೆ, ಶ್ಯಾಮಸುಂದರ ನಾಯ್ಕ, ಚಂದ್ರಕಾಂತ ನಾಯ್ಕ, ರಾಘವೇಂದ್ರ, ಮಂಜುನಾಥ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು