ಭಾನುವಾರ, ಜುಲೈ 25, 2021
22 °C

ದಾಂಡೇಲಿ: ಕಳವು ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕಳವು ಪ್ರಕರಣದ ಆರೋಪಿಯೊಬ್ಬನನ್ನು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ದಾಂಡೇಲಿಯ ಡಬ್ಲ್ಯು.ಸಿ.ಪಿ.ಎಂ. ಸ್ಟಾಫ್ ಕ್ವಾರ್ಟರ್ಸ್ ನಿವಾಸಿ, ಕೂಲಿ ಕೆಲಸ ಮಾಡುತ್ತಿದ್ದ ಕುಮಾರ ದೊಡ್ಮನಿ (24) ಬಂಧಿತ ಆರೋಪಿ.

ಆತನಿಂದ ಎರಡು ಟಿ.ವಿ.ಗಳು ಒಂದು ಫ್ರಿಜ್, ಒಂದು ಗಾದಿ, ಒಂದು ಟೀಪಾಯಿ, ನಾಲ್ಕು ಹೊದಿಕೆಗಳು, ನಾಲ್ಕು ತಲೆದಿಂಬುಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳ ಅಂದಾಜು ಮೌಲ್ಯ ₹ 50 ಸಾವಿರ ಎಂದು ಪೊಲೀಸರು ತಿಳಿಸಿದ್ದಾರೆ.

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ತಂಡ ರಚಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸೂಚಿಸಿದ್ದರು. ದಾಂಡೇಲಿ ಉಪ ವಿಭಾಗದ ಡಿ.ವೈ.ಎಸ್‍.ಪಿ ಪಿ.ಮೋಹನ ಪ್ರಸಾದ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು.

ಸಿ.ಪಿ.ಐ ಪ್ರಭು ಆರ್ ಗಂಗನಹಳ್ಳಿ ನೇತೃತ್ವದ ತಂಡದಲ್ಲಿ ಪಿ.ಎಸ್.ಐ ಹಣಮಂತ ಬಿರಾದಾರ, ಎ.ಎಸ್.ಐ ಮಹಾವೀರ ಕಾಂಬಳೆ, ಹೆಡ್ ಕಾನ್‌ಸ್ಟೆಬಲ್‌ಗಳಾದ ಗಂಗಾಧರ ಹನಕನಹಳ್ಳಿ, ಅಶೋಕ ಮೋರೆ, ಸುಧೀರನಾಯ್ಕ, ಅನಿಲ ಸಾವಂತ ಮತ್ತು ಸಿಬ್ಬಂದಿಗ ಮಂಜುನಾಥ ಎಚ್.ಶೆಟ್ಟಿ, ರಾಮಪ್ಪ ಬಂಕಾಪುರ, ರೋಹಿತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.