ಮಂಗಳವಾರ, ಮಾರ್ಚ್ 28, 2023
23 °C
ಹೊನ್ನಾವರಕ್ಕೆ ಅಲೆದಾಡುವ ತಾಪತ್ರಯ ಪರಿಹಾರ

22 ಗ್ರಾಮ ಅಂಕೋಲಾ ಅರಣ್ಯ ಉಪ ವಿಭಾಗಕ್ಕೆ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಹೊನ್ನಾವರ ಅರಣ್ಯ ವಿಭಾಗದ 22 ಗ್ರಾಮಗಳನ್ನು ಕಾರವಾರ ವಿಭಾಗದ ಅಂಕೋಲಾ ಉಪ ವಿಭಾಗಕ್ಕೆ ಸೇರ್ಪಡೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದರಿಂದ ಈ ಗ್ರಾಮಗಳ ಜನರು ದೂರದ ಹೊನ್ನಾವರಕ್ಕೆ ಅಲೆದಾಡುವುದು ತಪ್ಪಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

‘ಫೆಬ್ರುವರಿ 25ರಂದು ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ‍ಪ್ರಸ್ತಾಪಿಸಲಾಗಿತ್ತು. ಅಂಕೋಲಾ ತಾಲ್ಲೂಕಿನ ಬಹುತೇಕ ಗ್ರಾಮಗಳು ಕಾರವಾರ ಅರಣ್ಯ ವಿಭಾಗದ ಅಂಕೋಲಾ ಉಪ ವಿಭಾಗಕ್ಕೆ ಒಳಪಟ್ಟಿವೆ. ಆದರೆ, 22 ಗ್ರಾಮಗಳು ಹೊನ್ನಾವರ ಅರಣ್ಯ ವಿಭಾಗದ ಕುಮಟಾ ಉಪ ವಿಭಾಗಕ್ಕೆ ಒಳಪಟ್ಟಿವೆ. ಕುಮಟಾ ಉಪ ವಿಭಾಗ ಹಾಗೂ ಹೊನ್ನಾವರ ಅರಣ್ಯ ವಿಭಾಗೀಯ ಕಚೇರಿಗಳು ತಮ್ಮ ಮತಕ್ಷೇತ್ರಕ್ಕೆ ಒಳಪಟ್ಟಿಲ್ಲ. ಇದರಿಂದ ಆಡಳಿತ ನಿರ್ವಹಣೆ ಕಷ್ಟವಾಗುತ್ತದೆ ಎಂದು ಗಮನ ಸೆಳೆಯಲಾಗುತ್ತಿ’ ಎಂದು ಮಾಹಿತಿ ನೀಡಿದ್ದಾರೆ.

‘ಆಡಳಿತ ಹಿತದೃಷ್ಟಿಯಿಂದ 22 ಗ್ರಾಮಗಳನ್ನು ಅಂಕೋಲಾ ಉಪ ವಿಭಾಗಕ್ಕೆ ಸೇರಿಸಬೇಕು. ಅಂಕೋಲಾ ತಾಲ್ಲೂಕಿನ ಜನ ಕುಂದುಕೊರತೆಗಳ ನಿವಾರಣೆ ಹಾಗೂ ಕಾಗದಪತ್ರಗಳಿಗಾಗಿ ದೂರದ ಹೊನ್ನಾವರ ವಿಭಾಗದ ಕಚೇರಿಗೆ ಹೋಗುವುದನ್ನು ತಪ್ಪಿಸುವಂತೆ ಕೋರಲಾಗಿತ್ತು’ ಎಂದು ಹೇಳಿದ್ದಾರೆ.

‘ಈ ಮಾಹಿತಿಯನ್ನು ಪರಿಶೀಲಿಸಿದ್ದ ಸಚಿವರು, ಸೂಕ್ತ ಕ್ರಮ ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದರು. ಅಲ್ಲದೇ ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸ್ತಾವ ಸಲ್ಲಿಸಿದ್ದರು. ಈ ಕ್ರಮದಿಂದಾಗಿ, ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

18,430 ಹೆಕ್ಟೇರ್ ವಿಸ್ತೀರ್ಣ: ಅಂಕೋಲಾ ಉಪ ವಿಭಾಗಕ್ಕೆ ಸೇರ್ಪಡೆಯಾದ 22 ಗ್ರಾಮಗಳ ಅರಣ್ಯ ಪ್ರದೇಶವು ಒಟ್ಟು 18,430.18 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. 

ಹಿರೇಗುತ್ತಿ ವಲಯದ ಅಗ್ರಗೋಣ, ಜುಗಾ, ಹೆಗ್ರೆ, ಅಡಿಗೋಣ, ಕಾಮಗೆ, ಸಗಡಗೇರಿ, ದೇವಿಗದ್ದೆ, ಉಳುವರೆ, ಬಳಲೆ, ತಕಟಗೇರಿ, ಅಂದ್ಲೆ, ಕಾರೇಬೈಲ, ಕ್ಯಾಕಣಿ, ಶಿವಪುರ, ಮೊಗಟಾ, ಮೊರಳ್ಳಿ, ಗುಂಡಬಾಳಾ, ಹಿಲ್ಲೂರ, ಅಚವೆ, ಮಾಣಿಗದ್ದೆ, ಕುಂಟಗಣಿ, ಕತಗಾಲ ವಲಯದ ಕಬಗಾಲ, ಬ್ರಹ್ಮೂರು ಗ್ರಾಮಗಳು ಕಾರವಾರ ಅರಣ್ಯ ವಿಭಾಗಕ್ಕೆ ಸೇರ್ಪಡೆಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು