ಶನಿವಾರ, ಡಿಸೆಂಬರ್ 7, 2019
22 °C

ದನ ಕಾಯಲು ಹೋದವರ ಮೇಲೆ ಕರಡಿಗಳ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ತಾಲ್ಲೂಕಿನ ಕರಂಜೆ ಗ್ರಾಮದಲ್ಲಿ ಮಂಗಳವಾರ ದನ ಕಾಯಲು ಹೋದ ವ್ಯಕ್ತಿಯ ಮೇಲೆ ಎರಡು ಕರಡಿಗಳು ದಾಳಿ ನಡೆಸಿ ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿವೆ.

ಬಜಾರಕುಣಂಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಂಜೆಯ ಶಿವಾಜಿ ಸುಪೂಲೋ ದೇಸಾಯಿ (48) ಗಾಯಗೊಂಡವರು. ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಹೋಗುತ್ತಿದ್ದಾಗ ಎದುರಾದ ಎರಡು ಕರಡಿಗಳು ಏಕಾಏಕಿ ದಾಳಿ ಮಾಡಿದವು.   ಅವರ ಕಾಲು, ಕೈ ಹಾಗೂ ತಲೆಗೆ ಪೆಟ್ಟಾಗಿದೆ.

ಕರಡಿಗಳ ಕೂಗು ಮತ್ತು ಶಿವಾಜಿ ಅವರ ಚೀರಾಟ ಕೇಳಿದ ಜನರು ಓಡಿ ಬಂದು ರಕ್ಷಿಸಿದರು. ನಂತರ ಆಂಬುಲೆನ್ಸ್‌ನಲ್ಲಿ   ರಾಮನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ವೈದ್ಯರ ಸಲಹೆಯಂತೆ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ರವಾನಿಸಲಾಯಿತು. 

ತಾಲ್ಲೂಕಿನಲ್ಲಿ ಎರಡು ದಿನಗಳಲ್ಲಿ ನಡೆದ ಎರಡನೇ ಕರಡಿ ದಾಳಿ ಪ್ರಕರಣ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕುಂಬಾರವಾಡದ  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡ್ಕರ, ಗಾಯಾಳುವಿನ ವೈದ್ಯಕೀಯ ಖರ್ಚನ್ನು ಅರಣ್ಯ ಇಲಾಖೆಯಿಂದ ಭರಿಸಲಾಗುವುದು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)