ಭಾನುವಾರ, ಜನವರಿ 24, 2021
27 °C

ನಂದಿಪುರ: ಕ್ರಿಮಿನಾಶಕ ಕುಡಿದ ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಕ್ರಿಮಿನಾಶಕ ಕುಡಿದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ತಾಲ್ಲೂಕಿನ ನಂದಿಪುರ ಗ್ರಾಮದ ದೀಪಾ ವಡ್ಡರ (27) ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಂಡ ಮದ್ಯ ಸೇವಿಸಿ ಬಂದಿದ್ದರಿಂದ ಸಿಟ್ಟಾಗಿದ್ದ ಅವರು,  ಡಿ.31ರಂದು ಮನೆಯಲ್ಲಿ ಕ್ರಿಮಿನಾಶಕ ಕುಡಿದಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯತಪ್ಪಿ ಬಿದ್ದು ಸಾವು: ಟಿಬೆಟನ್ ಕ್ಯಾಂಪ್‍ನ ಜಾಂಗತ್ಸೆ ಬೌದ್ಧ ಮಂದಿರದ ಲುಂಬುಂಬ ಕಾಮ್ಜೆ ಕಟ್ಟಡದ ಕೆಲಸದಲ್ಲಿ ನಿರತನಾಗಿದ್ದ, ತಾಲ್ಲೂಕಿನ ಬಡ್ಡಿಗೇರಿ ಗ್ರಾಮದ ರಾಮು ತೊರವತ್(28), ಆಕಸ್ಮಿಕವಾಗಿ ಶೀಟ್ ಮುರಿದು ನೆಲಕ್ಕೆ ಬಿದ್ದು ಶನಿವಾರ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.