ಭಾನುವಾರ, ಮೇ 22, 2022
24 °C

ಸಾರಾಯಿಗಾಗಿ ಜಗಳ: ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನಗರದ ಕಳಸವಾಡದಲ್ಲಿ ಗುರುವಾರ ಬೆಳಗಿನ ಜಾವ, ಕುಡಿಯಲು ಸಾರಾಯಿ ತಂದು ಕೊಡುವ ವಿಚಾರದಲ್ಲಿ ಶುರುವಾದ ಜಗಳವು ಮಹಿಳೆಯ ಸಾವಿಗೆ ಕಾರಣವಾಗಿದೆ.

ಶಾಂತಾ ಗೌಡ (43) ಮೃತ ಮಹಿಳೆ. ಮೂಲತಃ ಗಜೇಂದ್ರಗಡದ ಅವರು, ಕಾರವಾರದ ಕಳಸವಾಡದಲ್ಲಿ ಹನುಮಂತ ಮನವೆಲ್ ಸಿದ್ದಿ (45) ಎಂಬುವವರೊಂದಿಗೆ ವಾಸವಿದ್ದರು. ಆರೋಪಿ ಹನುಮಂತ ಮುಂಡಗೋಡದ ಹನುಮಾಪುರ ನಿವಾಸಿಯಾಗಿದ್ದು, ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು.

‘ಬೆಳಗಿನ ಜಾವ 4.30ರ ಸುಮಾರಿಗೆ ತನಗೆ ಸಾರಾಯಿ ತಂದುಕೊಡುವಂತೆ ಶಾಂತಾ ಗೌಡ ಕೇಳಿ, ಆರೋಪಿಯ ಅಂಗಿ ಹಿಡಿದು ಎಳೆದರು. ಇದರಿಂದ ಸಿಟ್ಟಾದ ಆರೋಪಿಯು, ಮಹಿಳೆಯನ್ನು ಕುತ್ತಿಗೆ ಹಿಡಿದು ದೂಡಿದರು. ಆ ರಭಸಕ್ಕೆ ಆಕೆ ಮನೆಯ ಬಾಗಿಲಿನ ಮೆಟ್ಟಿಲಿನ ಮೇಲೆ ಬಿದ್ದು, ತಲೆಯ ಹಿಂಭಾಗಕ್ಕೆ ಗಂಭೀರವಾದ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ತಪ್ಪಿಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ತನಿಖೆ ಕೈಗೊಂಡಿರುವ ಪಿ.ಎಸ್.ಐ ಸಂತೋಷಕುಮಾರ್.ಎಂ ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು