ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಒಗ್ಗಟ್ಟಿನ ಕಲೆ: ಡಾ.ಜಿ.ಎಲ್.ಹೆಗಡೆ

Last Updated 27 ಫೆಬ್ರುವರಿ 2022, 13:48 IST
ಅಕ್ಷರ ಗಾತ್ರ

ಶಿರಸಿ: ಯಕ್ಷಗಾನ ಒಗ್ಗಟ್ಟಿನ ಕಲೆಯಾಗಿದ್ದು, ಇಲ್ಲಿ ಯಾವ ಕಲಾವಿದರರನ್ನೂ ಅವಕಾಶ ವಂಚಿತರಾಗಿಸುವ ಪ್ರಮೇಯ ಎದುರಾಗದು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಹೇಳಿದರು.

ಇಲ್ಲಿನ ನಯನ ಸಭಾಂಗಣದಲ್ಲಿ ಭಾನುವಾರ ಸೃಷ್ಟಿ ಕಲಾಪ ಸಂಸ್ಥೆ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಕ್ಷಗಾನದಲ್ಲಿ ಭಾಗವತರಿಗೂ ಮಿತಿ ಇದೆ. ಅವರ ಕೈಲಿ ಸೂತ್ರವೂ ಇದ್ದು, ಸೂತ್ರದ ಗೌರವವನ್ನು ಕಾಪಾಡಿಕೊಳ್ಳಬೇಕಿದೆ’ ಎಂದರು.

‘ಯಕ್ಷಗಾನದಲ್ಲಿ ಬಳಸುವ ಅತಿ ಸ್ವಾತಂತ್ರ್ಯ ಅಪಾಯಕಾರಿ ಹಾಗೂ ಅಮಲಾಗುತ್ತಿದೆ. ಕಲೆಯ ನೈಜ ಸೊಗಡು ಉಳಿದರೆ ಕನ್ನಡ ಭಾಷೆಯೂ ಉಳಿಯುತ್ತದೆ’ ಎಂದರು.

ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಮಾತನಾಡಿ, ‘ಯಕ್ಷಗಾನ ಕಲೆ ಹೃದಯ ಶ್ರೀಮಂತಿಕೆ ಕೊಟ್ಟಿದೆ. ಭಾಷೆಯ ಶುದ್ದತೆ ನೀಡಿದೆ’ ಎಂದರು.

ಸೃಷ್ಟಿ ಕಲಾಪದ ಅಧ್ಯಕ್ಷೆ ವಿಜಯನಳಿನಿ ರಮೇಶ ಅಧ್ಯಕ್ಷತೆ ವಹಿಸಿದ್ದರು. ಸುಬ್ರಾಯ ಹೆಗಡೆ ಕೆರೆಕೊಪ್ಪ ಗುರು ವಂದನೆ ಸ್ವೀಕರಿಸಿದರು.

ಸುಮಾ ಗಡಿಗೆಹೊಳೆ ಪ್ರಾರ್ಥಿಸಿದರು. ಮಾನಸಾ ಹೆಗಡೆ ಸ್ವಾಗತಿಸಿದರು. ಶೈಲಜಾ ಗೋರ್ನಮನೆ ಪ್ರಾಸ್ತಾವಿಕ ಮಾತನಾಡಿದರು. ನಯನಾ ಹೆಗಡೆ, ಸಾವಿತ್ರಿ ಶಾಸ್ತ್ರಿ, ಭವಾನಿ ಭಟ್ಟ, ಗಾಯತ್ರಿ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ರೋಹಿಣಿ ಹೆಗಡೆ ನಿರ್ವಹಿಸಿದರು. ದಾಕ್ಷಾಯಿಣಿ ಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT