ಯಲ್ಲಾಪುರ: ಕಾರು-ಲಾರಿ ಡಿಕ್ಕಿ- ಮೂವರು ಸಾವು

7

ಯಲ್ಲಾಪುರ: ಕಾರು-ಲಾರಿ ಡಿಕ್ಕಿ- ಮೂವರು ಸಾವು

Published:
Updated:

ಯಲ್ಲಾಪುರ: ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. 

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಚಿಕ್ಕಮಾವಳ್ಳಿ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ಅಪಘಾತ ನಡೆದಿದೆ. 

ವಿನಾಯಕ ಹೆಗಡೆ(40), ಅರ್ಚನಾ(25), ಮೂರು ವರ್ಷದ ಶ್ರಾವಣಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನೊಂದು ಮಗುವಿಗೆ ಗಾಯಗಳಾಗಿದ್ದು, ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿನಾಯಕ ಹೆಗಡೆ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ಸದ್ಯ ವರ್ಗಾವಣೆಯಾಗಿ ಬೆಳಗಾವಿಗೆ ಬಂದಿದ್ದಾರೆ. ಶಿರಸಿ ತಾಲ್ಲೂಕು ಅರಗಿನಮನೆಯ ಅವರು, ಊರಿಗೆ ಬಂದು ಬೆಳಗಾವಿಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 1

    Sad
  • 1

    Frustrated
  • 2

    Angry

Comments:

0 comments

Write the first review for this !